ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ ಆರೋಪದಡಿ ಬಿಜೆಪಿ ನಾಯಕನ ಮೇಲೆ ದೂರು ದಾಖಲಾಗಿದೆ. ಹಾಸನ ಮೂಲದ ಪ್ರಭಾವಿ ಬಿಜೆಪಿ ನಾಯಕನ ಮೇಲೆ ಯುವತಿಯೊಬ್ಬಳು ದೂರು ದಾಖಲಿಸಿದ್ದಾರೆ.
ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಆದ್ರೆ ಮದುವೆಯಾಗದೆ ನನಗೆ ಆ ನಾಯಕ ಮೋಸ ಮಾಡಿದ್ದಾರೆಂದು ದೂರು ದಾಖಲಾಗಿದೆ. ಸದ್ಯ ನಾಯಕ ತಲೆಮರೆಸಿಕೊಂಡಿದ್ದು ಆ ನಾಯಕನ ಹುಡುಕಾಟಕ್ಕೆ ಪೊಲೀಸ್ರು ಮುಂದಾಗಿದ್ದಾರೆ. ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.
PublicNext
06/01/2025 07:36 am