ಬೆಂಗಳೂರು: ಸಾರ್ವೆ ಮರ ಬಿದ್ದು ಬಾಲಕಿ ಸಾವು ಪ್ರಕರಣದಲ್ಲಿ ಪೊಲೀಸರ ವರ್ತನೆಗೆ ಬಾಲಕಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಮೃತದೇಹ ಬೇಗ ಕೊಡುವ ಬಗ್ಗೆ ಪ್ರಕ್ರಿಯೆ ಮುಗಿಸ್ತಿಲ್ಲ, ಘಟನೆ ನಡೆದು ಇಷ್ಟೋತ್ತಾದರೂ ಯಾರನ್ನೂ ಅರೆಸ್ಟ್ ಮಾಡಿಲ್ಲ, ಖಾಲಿ ಪೇಪರ್ ಮೇಲೆ ಸೈನ್ ಮಾಡು ಅಂತಾರೆ. ಬಿಲ್ಡಿಂಗ್ ಮಾಲೀಕರ ಹತ್ರ ಏನಾದ್ರೂ ಮಾತಾಡಿ ಅಂತಾರೆ. ನಾವು ಮೃತದೇಹ ತೆಗೆದುಕೊಂಡು ಹೋಗಿ ಸ್ಟೇಷನ್ ಹತ್ರ ಪ್ರೊಟೆಸ್ಟ್ ಮಾಡ್ತೀವಿ. ಮಧ್ಯಮ ವರ್ಗದವರು ಅಂದ ತಕ್ಷಣ ಈ ರೀತಿ ಮಾಡ್ತಿದಾರೆ.
ಖಾಲಿ ಪೇಪರ್‌ಗೆ ಸೈನ್ ಮಾಡೋದಂದ್ರೆ ಏನು..?ನಾವು ಕೇಳೋದಕ್ಕೆ ಯಾವುದಕ್ಕೂ ಸರಿಯಾಗಿ ರೆಸ್ಪಾನ್ಸ್ ಮಾಡಲ್ಲ. ಪೊಲೀಸರು ಕೂಡ ಇದ್ರಲ್ಲಿ ಶಾಮೀಲಾಗಿದಾರೆ ಅನ್ನೋ ಅನುಮಾನ ಮೂಡ್ತಿದೆ. ನಮಗೆ ನ್ಯಾಯ ಸಿಗ್ತಿಲ್ಲ, ಅಂತ ಮೃತ ಬಾಲಕಿ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
PublicNext
05/01/2025 11:57 am