ಬೆಳಗಾವಿ: ಸಿಐಡಿಯವರು ಯಾವ ರೀತಿ ಸ್ಥಳ ಮಹಜರು ಮಾಡ್ತಾರೆ ಎಂದು ಹೇಳಬೇಕಾಗುತ್ತೆ. ಅಲ್ಲೇನು ಕುರ್ಚಿ ಅಥವಾ ಟೇಬಲ್ ಸ್ಥಳ ಮಹಜರು ಮಾಡ್ತಾರೋ? ಅಥವಾ ಸದನಕ್ಕೆ ಕರೆದುಕೊಂಡು ಬಂದು ಮಾಡ್ತಾರೋ ಅನ್ನೋದನ್ನ ಹೇಳಬೇಕು. ಯಾವ ರೀತಿ ಪಂಚನಾಮೆ ಮಾಡ್ತಾರೆ ಅನೋದನ್ನ ಸಿಐಡಿ ಹೇಳಲಿ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಚನಾಮೆ ಮಾಡ್ತಾರೆ ಅಂದರೆ ಹೇಗೆ ಮಾಡ್ತಾರೆ. ಸದನ ಅಡ್ಜನ್ ಆಗಿದೆ, ಸದನ ಲಾಕ್ ಆಗಿದೆ. ಸದನದಲ್ಲಿ ಒಳಗಡೆ ಬಡಿದಾಟ ಹೊಡೆದಾಟವಾಗಿಲ್ಲ, ಪಂಚನಾಮೆ ಮಾಡಬೇಕು ಅಂದರೆ ಯಾವ ರೀತಿ ಮಾಡಬೇಕು ಅನೋದನ್ನ ಸಿಐಡಿ ಹೇಳಲಿ. ಅನುಮತಿ ಕೊಡಬೇಕೋ ಕೊಡಬಾರದೋ ಅನೋದನ್ನ ಹೇಳೋಕೆ ಆಗೋದಿಲ್ಲ, ಪರಿಶೀಲನೆ ಮಾಡ್ತೇನಿ. ಸದ್ಯಕ್ಕೆ ಸಿಐಡಿ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡೋದಿಲ್ಲ ಎಂದರು.
ವಿಡಿಯೋ ಸಾಕ್ಷಿ ಕೊಡಿ ಎಂದು ಸಿಐಡಿ ಪತ್ರ ವಿಚಾರಕ್ಕೆ ಮಾತನಾಡಿದ ಅವರು, ನಿನ್ನೆ ವಿಡಿಯೋ ಸಾಕ್ಷಿಯನ್ನ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟಿದ್ದಾರೆ. ಮೊದಲು ರವಿ ಕೊಟ್ಟಿದ್ರು, ರವಿಯವರು ಕೊಟ್ಟಾಗ ಒಂದು ಸೈಡ್ ಆಗಿತ್ತು. ಎರಡು ಕಡೆಯಿಂದ ಬಂದಿದೆ. ನಮ್ಮ ಕಾರ್ಯದರ್ಶಿ ಜತೆಗೆ ನಮ್ಮದೇ ಆಗಿರುವ ತಂಡಕ್ಕೆ ವಿಡಿಯೋ ಕೊಟ್ಟಿದ್ದೇನೆ. ನಾಳೆಗೆ ಅವರು ಏನು ರಿಪೋರ್ಟ್ ಕೊಡ್ತಾರೆ ನೋಡಿ ಎಫ್ಎಸ್ ಎಲ್ ಗೆ ಕಳುಹಿಸುತ್ತೇವೆ. ವಿಡಿಯೋ ಸಾಕ್ಷಿ ಎಫ್ ಎಸ್ ಎಲ್ ಗೆ ಹೋಗಿ ಬಂದ ಬಳಿಕ ಸತ್ಯಾಂಶ ನೋಡಿಕೊಂಡು ನಮ್ದೆ ಆಗಿರುವ ತೀರ್ಮಾನ ಮಾಡುತ್ತೇವೆ.
ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಸಂಧಾನ ಮಾಡ್ತೇವಿ ಎಂದು ಸಭಾಪತಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇವತ್ತು ನಮ್ಮ ಕಾರ್ಯದರ್ಶಿಗೆ ಹೇಳಿದ್ದೇನೆ. ನಾಳೆ ಅಥವಾ ನಾಡಿದ್ದು ಇಬ್ಬರಿಗೂ ಪತ್ರ ಬರೆಯಲು ನಿರ್ಧಾರ ಮಾಡಿದ್ದೇನೆ. ಈಗ ಇಬ್ಬರನ್ನ ನೋಡಿದ್ರೆ ಸಂಧಾನ ಆಗೋ ರೀತಿ ಕಾಣ್ತಿಲ್ಲ. ಆದರೂ ಇಬ್ಬರಿಗೂ ಫೋನ್ ಮಾಡಿ ಸಂಧಾನ ಮಾಡಲು ಪ್ರಯತ್ನಿಸುವೆ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿ.ಟಿ. ರವಿ ಇಬ್ರೂ 19ರಂದು ದೂರು ಕೊಟ್ಟಿದ್ರು. 19ಕ್ಕೆ ಎರಡು ಕಂಪ್ಲೀಟ್ ನೋಡಿ ಅವತ್ತು ನಾನು ತೀರ್ಮಾನ ಮಾಡಿದೆ, ಅಲ್ಲಿಗೆ ನಂದು ಮುಗಿತು. ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಮ್ಮೆ ಸಿ.ಟಿ. ರವಿ ವಿರುದ್ಧ ದೂರು ಕೊಟ್ಟಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟಿರುವ ದೂರನ್ನು ಸೋಮವಾರ ಪರಿಶೀಲನೆ ಮಾಡುತ್ತೇನೆ. ಸೋಮವಾರ ಮತ್ತು ಮಂಗಳವಾರ ಮತ್ತೊಮ್ಮೆ ವಿಡಿಯೋ, ಆಡಿಯೋ ನೋಡುತ್ತೇವೆ. ಎಫ್ ಎಸ್ ಎಲ್ ಗೆ ಕಳುಹಿಸುವ ಹಾಗೆ ಇದ್ರೆ ಕಳುಹಿಸುತ್ತೇವೆ,. ನಂತರ ವರದಿ ಬಂದ ನಂತರ ತೀರ್ಮಾನ ಮಾಡುತ್ತೇವೆ ಎಂದರು.
PublicNext
04/01/2025 11:08 pm