ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆಗೆ ನಡೆದುಕೊಂಡು ಹೊರಟಿದ್ದ ವೇಳೆ ಮರದ ತುಂಡು ಬಿದ್ದು ಬಾಲಕಿ ಸಾವು

ಬೆಂಗಳೂರು: ಸೆಂಟ್ರಿಂಗ್ ಬಳಸೋ ಸಾರವೆ ಮರಬಿದ್ದು ಬಾಲಕಿ ಸಾವನ್ನಪ್ಪಿರೋ ಘಟನೆ ವಿ.ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೇಜಸ್ವಿನಿ (15) ಸಾವನ್ನಪ್ಪಿದ್ದು, ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿ.ವಿ ಪುರಂ ಮೆಟ್ರೋ ನಿಲ್ದಾಣ ಬಳಿ ದುರ್ಘಟನೆ ನಡೆದಿದೆ.

ಶನಿವಾರ ಮಧ್ಯಾಹ್ನ ಸ್ಕೂಲ್ ಹಾಗೂ ಡ್ಯಾನ್ಸ್‌ ಕ್ಲಾಸ್ ಮುಗಿಸಿ ಬಾಲಕಿ ಮನೆಗೆ ಬರುತ್ತಿದ್ದ ತೇಜಸ್ವಿನಿ ಮೇಲೆ ನಿರ್ಮಾಣ ಹಂತದ ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ಮರದ ತುಂಡು ಬಿದ್ದು ಅವಘಡ ಸಂಭವಿಸಿದೆ..

ಮರದ ತುಂಡು ಬಿದ್ದು, ಗಂಭೀರ ಪೆಟ್ಟಾಗಿ ಬಾಲಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿವಿ ಪುರಂ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

04/01/2025 08:57 pm

Cinque Terre

42.06 K

Cinque Terre

0

ಸಂಬಂಧಿತ ಸುದ್ದಿ