ಚಿತ್ರದುರ್ಗ: ಭರಮಸಾಗರ ವಿ.ವಿ.ಕೇಂದ್ರದ ವಿದ್ಯುತ್ ಪ್ರಸರಣ ಮಾರ್ಗದ ಪರಿವರ್ತನೆ ಕಾರ್ಯದ ನಿಮಿತ್ತ ಡಿ.9 ಹಾಗೂ ಡಿ.23 ರಂದು ಭರಮಸಾಗರ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಆದರೆ ಗ್ರಾಹಕರು ಕಾಮಗಾರಿ ನಿರ್ವಹಿಸಲು ಅಡ್ಡಪಡಿಸಿದ್ದರಿಂದ ಸದರಿ ದಿನಗಳಲ್ಲಿ ವಿದ್ಯುತ್ ಪ್ರಸರಣ ಮಾರ್ಗದ ಪರಿವರ್ತನೆ ಕಾರ್ಯ ನಡೆದಿರುವುದಿಲ್ಲ. ಈ ಹಿನ್ನಲೆಯಲ್ಲಿ ಜ.6 ರಂದು ಮತ್ತೊಮ್ಮೆ ಭರಮಸಾಗರ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜ.6 ರಂದು ಬೆಳಿಗ್ಗೆ 11.00 ರಿಂದ ಸಂಜೆ 4:00 ಗಂಟೆಯವರೆಗೆ ಕಾಮಗಾರಿ ಜರುಗಲಿದ್ದು, ಈ ಅವಧಿಯಲ್ಲಿ ಭರಮಸಾಗರ ವಿ.ವಿ. ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಹೆಗ್ಗೆರೆ , ಎಮ್ಮೆಹಟ್ಟಿ , ನಲ್ಲಿಕಟ್ಟೆ , ಕೋಳಾಳ್ ಎನ್.ಜೆ.ವೈ , ಹೆಗ್ಗಡೆಹಾಳ್, ವಿಜಾಪುರ , ಶಿವನಕೆರೆ , ನಂದಿಹಳ್ಳಿ , ಬಹದುರ್ ಘಟ್ಟ , ಅಡವಿ ಗೋಲ್ಲರಹಳ್ಳಿ , ಭರಮಸಾಗರ , ಪಮೇರಹಳ್ಳಿ , ಕೋಗುಂಡೆ , ಎಸ್.ಕೆ.ಎಮ್ ಕೈಗಾರಿಕ ಪ್ರದೇಶ, ಕೋಡಿಹಳ್ಳಿ , ಅರಳಕಟ್ಟೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
Kshetra Samachara
04/01/2025 08:35 pm