ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ರಾಂಪುರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮ

ಮೊಳಕಾಲ್ಮುರು: ತಾಲೂಕಿನ ರಾಂಪುರ ಪತ್ತಿಬಸಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀಕನಕದಾಸರ ಜಯಂತೋತ್ಸವ ಕಾರ್ಯಕ್ರಮ ನಡೆಯಿತು.

ಹೊಸದುರ್ಗ ಕಾಗಿನೆಲೆ ಗುರು ಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ,ಹಿಂದಿನಿಂದಲೂ ಬಸವಣ್ಣ, ಕನಕದಾಸ, ಬುದ್ಧ ಸೇರಿದಂತೆ ಇನ್ನಿತರ ಶರಣರನ್ನು ಇಂದಿಗೂ ನೆನೆಯುವ ಸಮಾಜವು ಕೆಳಜಾತಿಯವನು ಪ್ರತಿಭಾವಂತನಾಗಿದ್ದರೂ ಅವನಿಗೆ ಗೌರವ ನೀಡದೆ, ಮೇಲ್ತಾತಿಯವನು ಓದಲು, ಬರೆಯಲು ಬಾರದಿದ್ದರೂ ಅವನಿಗೆ ಗೌರವ ನೀಡುತ್ತಿದೆ. ಇದರ ಬದಲು ವಿವೇಕವಂತ, ಜ್ಞಾನವಂತ ಹಾಗೂ ಸಂಸ್ಕೃತವಂತನಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದರು.

ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್ ನೀಡಿದ ವರದಿಯನ್ನು ಶೀಘ್ರವೇ ಜಾರಿಗೊಳಿಸುವ ಭರವಸೆ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಈ ಸಂಬಂಧ ಜಿಲ್ಲೆಯ ಶಾಸಕರು ಸಿಎಂ ಬಳಿ ಚರ್ಚಿಸುತ್ತೇವೆ. ಜಾತಿ ಗಣತಿಯಿಂದ ಅನೇಕ ಸಮುದಾಯಗಳಿಗೆ ನ್ಯಾಯಯುತ ಸೌಲಭ್ಯಗಳು ದೊರೆಯಲಿವೆ ಎಂದರು.

ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆದ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಮಹಿಳೆಯರು, ಮಕ್ಕಳು ಕಳಸ ಕುಂಭ ಹೊತ್ತು ಸಾಗುತ್ತಿದ್ದರು. ಕನಕದಾಸರ ವೇಷ ಭೂಷಣ ತೊಟ್ಟ ವ್ಯಕ್ತಿ ಗಮನ ಸೆಳೆದರು. ಮೆರವಣಿಗೆಯಲ್ಲಿ ಪುರುಷ ಹಾಗೂ ಮಹಿಳೆಯರ ಡೊಳ್ಳು ಕುಣಿತ, ಗೊರವರ ಕುಣಿತಗಳು ಹೆಚ್ಚು ಆಕರ್ಷಕವಾಗಿದ್ದವು.

Edited By : PublicNext Desk
Kshetra Samachara

Kshetra Samachara

06/01/2025 06:15 pm

Cinque Terre

3.66 K

Cinque Terre

0

ಸಂಬಂಧಿತ ಸುದ್ದಿ