ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸದುರ್ಗ: ಸಾಣೇಹಳ್ಳ ಶ್ರೀಗಳಿಗೆ ಕಾಯಕಯೋಗಿ ಸಿದ್ಧರಾಮೇಶ್ವರ ಪ್ರಶಸ್ತಿ ಪ್ರಕಟ

ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರಿಗೆ ಕರ್ನಾಟಕ ಸರ್ಕಾರ ಕಾಯಕಯೋಗಿ ಸಿದ್ಧರಾಮೇಶ್ವರ ಪ್ರಶಸ್ತಿಯನ್ನು ಪ್ರಕಟಿಸಿದ್ದು ಹಲವರು ಸರ್ಕಾರ ಮತ್ತು ಪೂಜ್ಯರನ್ನು ಅಭಿನಂದಿಸಿದ್ದಾರೆ. ಇಂದು ಕಡೂರು ತಾಲ್ಲೂಕು ಚೌಳಹಿರಿಯೂರು ಗ್ರಾಮದ ಸೋಮೇಶ್ವರ ಸ್ವಾಮಿ ವಿಶ್ವಸ್ಥ ಮಂಡಳಿಯವರು ತಮ್ಮ ಗ್ರಾಮದ ಪರವಾಗಿ ಸಾಣೇಹಳ್ಳಿಗೆ ಬಂದು ಪೂಜ್ಯರಿಗೆ ಶಾಲು ಫಲಪುಷ್ಪದೊಂದಿಗೆ ಕಾಣಿಕೆ ನೀಡಿ ಗೌರವಿಸಿದರು. ಮಾಜಿ ಗ್ರಾಮಪಂಚಾಯತಿ ಅಧ್ಯಕ್ಷ ಅಶೋಕ್ ಅವರು ಮಾತನಾಡಿ,ನಮ್ಮ ಗುರುಗಳ ಕಾರಣದಿಂದ ಈ ಭಾಗದ ಜನರು ಕಲೆ, ಸಾಹಿತ್ಯ, ಸಂಗೀತ ಸವಿಯುವ ಅವಕಾಶವಾಗಿದೆ. ಇಂತಹ ಗುರುಗಳನ್ನು ೪೭ ವರ್ಷಗಳ ಹಿಂದೆ ಹಿರಿಯ ಪೂಜ್ಯರು ತರಳ ಬಾಳು ಎಂದು ಹಾರೈಸಿದ್ದರು. .

Edited By : PublicNext Desk
Kshetra Samachara

Kshetra Samachara

08/01/2025 09:08 am

Cinque Terre

1.72 K

Cinque Terre

0

ಸಂಬಂಧಿತ ಸುದ್ದಿ