ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತದಾರರ ಓಲೈಕೆಗೆ ಮಾಡುವ ಢೋಂಗಿತನ ಬಹಳ ದಿನಗಳ ಕಾಲ ನಡೆಯುವುದಿಲ್ಲ

ಚಿತ್ರದುರ್ಗ :ರಾಜಕಾರಣದಲ್ಲಿ ಮತದಾರರ ಓಲೈಕೆಗೆ ಮಾಡುವ ಢೋಂಗಿತನ ಬಹಳ ದಿನಗಳ ಕಾಲ ನಡೆಯುವುದಿಲ್ಲ. ಜನರ ಅಪೇಕ್ಷೆಗಳನ್ನು ಅರಿತು ಕೆಲಸ ಮಾಡುವ ರಾಜಕಾರಣಿ ಜನರ ಮನಸ್ಸಿನಲ್ಲಿ ಉಳಿಯುತ್ತಾನೆ ಎಂದು ಹೊಳಲ್ಕೆರೆ ಶಾಸಕ ಡಾ. ಎಂ.ಚಂದ್ರಪ್ಪ ಹೇಳಿದರು. ಸಿರಿಗೆರೆ ಸಮೀಪದ ಬೆನ್ನೂರು ಸರ್ಕಲ್‌ನಲ್ಲಿ 65 ಕೋಟಿ ರು.ವೆಚ್ಚದ 13 ಕಿಮೀ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

.ರಾಜಕಾರಣಿಯಾದವನು ಜನರು ಮೆಚ್ಚುವ ಕೆಲಸ ಮಾಡಬೇಕು. ಜನರು ಅರ್ಜಿಗಳನ್ನು ಹಿಡಿದುಕೊಂಡು ಜನಪ್ರತಿನಿಧಿಯ ಮನೆ ಬಾಗಿಲಿಗೆ ಬರಬಾರದು. ಜನರ ಆಶೋತ್ತರಳು ಏನು, ಅವರ ಬೇಡಿಕೆಗಳೇನು ಎಂಬುದನ್ನು ಅರಿತು ತಾನೇ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಕ್ಷೇತ್ರದ ಜನರು ಬಾಗಿಲಿಗೆ ಬಂದು ಬೇಡಿಕೆಗಳನ್ನು ಸಲ್ಲಿಸುವ ತನಕ ಕಾಯದೆ ಪ್ರತಿ ಗ್ರಾಮದ ಬೇಡಿಕೆಗಳನ್ನು ಅರಿತು ಕಾರ್ಯಯೋಜನೆ ರೂಪಿಸಿ ಕೆಲಸ ಮಾಡುತ್ತಿದ್ದೇನೆ. ಆ ಕಾರಣದಿಂದಲೇ ಮತದಾರರು ನನ್ನನ್ನು ೫ ಬಾರಿ ಆಯ್ಕೆ ಮಾಡಿದ್ದಾರೆ ಎಂದರು.

Edited By : PublicNext Desk
Kshetra Samachara

Kshetra Samachara

08/01/2025 09:01 am

Cinque Terre

3.2 K

Cinque Terre

0

ಸಂಬಂಧಿತ ಸುದ್ದಿ