ಚಿತ್ರದುರ್ಗ: ತಂತ್ರಜ್ಞಾನ ಯುಗದಲ್ಲಿ ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಮೂಡನಂಬಿಕೆಯನ್ನು ಬದಿಗೊತ್ತಿ ಮೂಲವನ್ನ ನಂಬಬೇಕೆಂದು ಬಿ. ಮೂಗಪ್ಪ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೇಳಿದರು.
ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಇಲಾಖೆಯಿಂದ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹದಿಹರೆಯದ ಹೆಣ್ಣು ಮಕ್ಕಳು ಋತುಮತಿಯಾದಾಗ ಮತ್ತು ತಾಯಂದಿರು ಹೆರಿಗೆಯಾದ ಸಂದರ್ಭದಲ್ಲಿ ಮನೆಯಿಂದ ಹೊರಗಡೆ ಪ್ರತ್ಯೇಕವಾಗಿಟ್ಟು ಅವರನ್ನು ಆರೈಕೆ ಮಾಡುತ್ತಿರುವುದು ಇನ್ನೂ ಕೂಡ ಕಂಡುಬರುತ್ತಿರುವುದು ವಿಷಾದನೀಯ ಸಂಗತಿ, ಮೈನಡುಕ ಹುಟ್ಟುವ ಚಳಿ, ಕೀಟಗಳ ಹಾವಳಿ ಹಾಗೂ ಮೊಬೈಲ್ಗಳ ಬಳಕೆಯಿಂದ ಹೆಣ್ಣು ಮಕ್ಕಳಿಗೆ ಅಪಾಯ ಬರುವ ಸಾಧ್ಯತೆ ಇದೆ ಜೀವನದಲ್ಲಿ ಹೆಣ್ಣು ಮಕ್ಕಳಿಗೆ ಋತುಚಕ್ರ ಇದೊಂದು ಬಂದು ಹೋಗುವ ಸಹಜಕ್ರಿಯೆ ಎಂಬುದನ್ನು ಅರಿತು ನಮ್ಮ ಮನೆಯ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. "ಭಕ್ತಿ ಭಾವ ಪೂಜೆ- ಪುರಸ್ಕಾರ ಬಿಡಬೇಡಿ ಆದರೆ ಹೆಣ್ಣು ಮಕ್ಕಳನ್ನು ಹೊರಗಡೆ ಇಡಬೇಡಿ" ಎಂದರು ಅನಿರೀಕ್ಷಿತ ಸಂದರ್ಭದಲ್ಲಿ ಈ ಪಿಡುಗು ತೊಲಗಬೇಕಾದರೆ ಹಿರಿಯರು ಇದರ ಬಗ್ಗೆ ಚಿಂತನೆ ಮಾಡುವುದರ ಜೊತೆಗೆ ಮುಂದಿನ ಪೀಳಿಗೆ ಆರೋಗ್ಯವಂತರಾಗಲು ಉತ್ತಮ ಮಾರ್ಗದರ್ಶನ ನೀಡಿ ಎಂದರು.
ಜ್ಞಾನವಿಕಾಸ ಸಮಿತಿ ಸಮನ್ವಯಾಧಿಕಾರಿ ಶಿವಲೀಲಾ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ ಹೇಮಾವತಿ ಅಮ್ಮನವರ ಕನಸು ನನಸಾಗಬೇಕಾದರೆ ಸಾರ್ವಜನಿಕ ತಾಯಂದಿರು ಆರ್ಥಿಕ ಅಭಿವೃದ್ಧಿಯ ಜೊತೆಗೆ ಜ್ಞಾನಾಭಿವೃದ್ಧಿ ಪಡೆದು ಉತ್ತಮ ಕೌಶಲ್ಯಗಳನ್ನು ಆಯ್ದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
Kshetra Samachara
06/01/2025 07:03 pm