ಚಿತ್ರದುರ್ಗ: ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿರ ತಿಳುವಳಿಕೆ ಉದ್ದೇಶ ಹಿನ್ನೆಲೆ ಹಮ್ಮಿಕೊಂಡಿದ್ದ ಪೊಲೀಸ್ ವಸ್ತು ಪ್ರದರ್ಶನವನ್ನು ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ.
ನಗರದ ಡಿಆರ್ ಗ್ರೌಂಡ್ ನಲ್ಲಿ ಜನವರಿ 4 ರಿಂದ 5 ನೇ ತಾರೀಕಿನ ವರೆಗೆ ಸಾರ್ವಜನಿಕರಿಗೆ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಕಾರ್ಯ ಕುರಿತಂತೆ ಮಾಹಿತಿ ನೀಡಲು ಪೊಲಿಸ್ ಇಲಾಖೆ ವಸ್ತು ಪ್ರದರ್ಶನ, ಸೈಬರ್ ಕ್ರೈಂ ತಿಳುವಳಿಕೆ ನೀಡುವ ಉದ್ದೇಶದಿಂದ 2 ದಿನಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ, ಸಾರ್ವಜನಿಕರೂ ಭಾಗಿಯಾಗಿದ್ರು. ಇನ್ನು ಉತ್ತಮ ಪ್ರತಿಕ್ರಿಯೆ ಬಂದ ಬೆನ್ನಲ್ಲೇ ಇನ್ನಷ್ಟು ಸಾರ್ವಜನಿಕರಿಗೆ ಇದರ ಉಪಯೋಗವಾಗಲೀ ಎನ್ನುವ ದೃಷ್ಟಿಯಿಂದ ದಿನಾಂಕ 7 ಜನವರಿ ವರೆಗೆ ವಿಸ್ತರಿಸಿ ಜಿಲ್ಲಾ ಪೊಲೀಸ್ ಇಲಾಖೆ ಆದೇಶಿಸಿದೆ. ಇನ್ನು ಸಾರ್ವಜನಿಕರು ಇದರ ಸದುಪಯೋಗ ಪಡೆದು ಅಪರಾಧ ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಕೈಗೂಡಿಸಬೇಕು ಅಂತಾ ಕೋರಲಾಗಿದೆ.
Kshetra Samachara
06/01/2025 07:10 pm