ಚಿತ್ರದುರ್ಗ : ಹವಮಾನ ವೈಪರೀತ್ಯದಿಂದ ಶೇಂಗಾ ಹಾಗೂ ತೊಗರಿ ಬೆಳೆ ಕುಂಠಿತವಾಗಿರುವುದರಿಂದ ಬೆಳೆ ವಿಮೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ತಾಲೂಕು ಕೃಷಿ ಸಹಾಯಕ ನಿರ್ದೇಶಕರಿಗೆ ಕಸಬಾ ಹೋಬಳಿಯ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ವತಿಯಿಂದ ಮನವಿ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮನವಿ ಪತ್ರ ನೀಡಿ ಮಾತನಾಡಿದ ಚಳ್ಳಕೆರೆ ತಾಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರ ಸಂಘದ ಅಧ್ಯಕ್ಷರಾದ ಡಾ. ಸಿ. ಶಿವಲಿಂಗಪ್ಪ. ಚಳ್ಳಕೆರೆ ಮೊದಲೇ ಬರಗಾಲದ ನಾಡು ಎಂದೇ ಹೆಸರುಗಳಿಸಿದೆ .ಕಳೆದ ಬಾರಿ ಅಲ್ಪ ಮಳೆಯಾಗಿ ಅವಮಾನ ವೈಪರಿತ್ಯದಿಂದ ಬಿತ್ತನೆ ಮಾಡಿದ ಶೇಂಗಾ ಹಾಗೂ ತೊಗರಿ ಬೆಳೆ ಸಂಪೂರ್ಣ ನಾಶವಾಗಿದ್ದು ಈ ಅವಧಿಯಲ್ಲಿ ರೈತರು ಬೆಳೆ ವಿಮೆಯನ್ನ ಪಾವತಿ ಮಾಡಿದ್ದರು ಆದರೆ ಅಧಿಕಾರಿಗಳ ನಿರ್ಲಕ್ಷತನದಿಂದ ಕೆಲವು ಭಾಗಗಳಲ್ಲಿ ರೈತರಿಗೆ ಬೆಳೆ ತಲುಪಿಲ್ಲಾ ಬೆಳೆ ವಿಮೆಯನ್ನ ನೀಡಬೇಕು ಹಾಗೂ ನಷ್ಟ ಹೊಂದಿದ ರೈತರಿಗೆ ಪರಿಹಾರವನ್ನು ಕೊಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ. ಸಂಘದ ಕಾರ್ಯದರ್ಶಿ ಎಸ್ ಪ್ರಕಾಶ್ ,ಸಹ ಕಾರ್ಯದರ್ಶಿ ಡಾ .ಆರ್ ಎ .ದಯಾನಂದಮೂರ್ತಿ ,ನಿರ್ದೇಶಕರಾದ ಬಿ ಭಾರತೇಶ ರೆಡ್ಡಿ, ಜಿಪಿ ತಮ್ಮೇಗೌಡ .ಬಿ.ಎಂ.ಶಶಧರ ಇದ್ದರು....
Kshetra Samachara
04/01/2025 08:01 pm