ಹಿರಿಯೂರು: ಕಡಲೆ ಬೆಳೆ ಈ ಬಾರಿ ಉತ್ಕೃಷ್ಟವಾಗಿದ್ದು, ಕೆಲವು ರೈತರ ಹೊಲಗಳಲ್ಲಿ ಕಡಲೆಗೆ ಸೊರಗು ರೋಗ ಕಾಣಿಸಿಕೊಂಡಿದೆ. ಅದಕ್ಕಾಗಿ ಟ್ರೈಕೊಡರ್ಮ್ ಔಷಧಿಯನ್ನು ಸಿಂಪಡಿಸಿ ಎಂದು ಹಿರಿಯ ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್ ತಿಳಿಸಿದರು. ಸಮೀಪದ ಹೂವಿನಹೊಳೆ ರೈತ ರವೀಂದ್ರ ಅವರ ಕಡಲೆ ತೋಟದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯೂರು ತಾಲ್ಲೂಕಿನಲ್ಲಿ 20,000 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕಿಂತ ಬೆಳೆ ಉತ್ಕೃಷ್ಟವಾಗಿ ಬಂದಿದೆ. ಕೆಲವು ರೈತರ ತೋಟದಲ್ಲಿ ಕಡಲೆ ಗಿಡ ಒಣಗಿದ ರೀತಿಯಲ್ಲಿ ರೋಗ ಕಾಣಿಸಿಕೊಂಡಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ತಪ್ಪದೇ ಬೀಜೋಪಚಾರ ಮಾಡಬೇಕು. ನಂತರ 25 ದಿನಗಳಲ್ಲಿ ಕಾರ್ಬನ್ ಡೈಸಿಮ್ ಔಷಧಿಯನ್ನು ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಬಳಸಿ ಸಿಂಪಡಣೆ ಮಾಡಿದರೆ ರೋಗ ಹತೋಟಿಗೆ ಬರುತ್ತದೆ ಎಂದರು
Kshetra Samachara
06/01/2025 03:08 pm