ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಚಿಕ್ಕಗುಂಜಳ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ! ವೈರಲ್ ವಿಡಿಯೋ ನಿಜಾನಾ ?

ಕುಂದಗೋಳ : ರೈತಾಪಿ ಜಮೀನಿನಲ್ಲಿ ಚಿರತೆಯೊಂದು ಕಾಣಿಸಿಕೊಂಡು ಜನರ ಭಯಕ್ಕೆ ಗ್ರಾಸವಾದ ಘಟನೆ ಕುಂದಗೋಳ ತಾಲೂಕಿನ ಚಿಕ್ಕಗುಂಜಳ ಮತ್ತು ಹರ್ಲಾಪೂರ, ಪಶುಪತಿಹಾಳ ಗ್ರಾಮಗಳ ಹೊರವಲಯದಲ್ಲಿ ನಡೆದಿದೆ.

ಹೌದು ! ಇತ್ತಿಚಿಗೆ ಲಕ್ಷ್ಮೇಶ್ವರ ಪಟ್ಟಣದ ದೇಸಾಯಿ ಬಣ ಹಾಗೂ ಪೇಠಬಣ ಭಾಗದ ಹೊಲಗಳಲ್ಲಿ ಮಂಗಳವಾರ ಸಂಜೆ ಚಿರತೆ ಕಾಣಿಸಿಕೊಂಡ ನಂತರದಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಹೆಜ್ಜೆ ಗುರುತು ಪತ್ತೆ ಮಾಡಿದ್ದರು.

ಇದೀಗ ಲಕ್ಷ್ಮೇಶ್ವರ ಪಟ್ಟಣಕ್ಕೆ ಹತ್ತಿರವಿರುವ ಕುಂದಗೋಳ ತಾಲೂಕಿನ ಚಿಕ್ಕಗುಂಜಳ ಗ್ರಾಮದ ರೈತಾಪಿ ಜನರ ಹೊಲಗಳಲ್ಲಿ ಚಿರತೆಯನ್ನು ಬಸವರಾಜ ಎಂಬ ರೈತ ಹಾಗೂ ಕುರಿಗಾಹಿಗಳು ನೋಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದಲ್ಲದೆ ಸ್ಥಳದಲ್ಲಿಯೇ ನಾಯಿಯೊಂದು ಸತ್ತಿರುವುದು ಮತ್ತಷ್ಟೂ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ, ಹರ್ಲಾಪೂರ, ಪಶುಪತಿಹಾಳ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಾಗೃತಿ ಕೆಲಸ ಮಾಡಿದ್ದಾರೆ.

ಒಟ್ಟಾರೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಚಿರತೆ ಹೊಲದಲ್ಲಿ ಮಲಗಿ ಘರ್ಜಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ಎಲ್ಲಿಯದು ಎಂಬುದು ಸ್ಪಷ್ಟವಾಗಿಲ್ಲಾ. ಈ ಬಗ್ಗೆ ಸಾರ್ವಜನಿಕ ಮಾತ್ರ ಎಚ್ಚರ ! ಎಚ್ಚರ !

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Suman K
Kshetra Samachara

Kshetra Samachara

04/01/2025 06:46 pm

Cinque Terre

33.82 K

Cinque Terre

1

ಸಂಬಂಧಿತ ಸುದ್ದಿ