ಬೆಂಗಳೂರು : ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಅಳಂದ ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಏಕಾಂಗಿ ಪ್ರತಿಭಟನೆ ನಡೆಸಿದರು. ರೈತ ಹೋರಾಟಗಾರ ದಲ್ಲೇವಾಲ ಎಪಿಎಂಸಿ ಕಾಯ್ದೆಗೆ ಆಗ್ರಹಿಸಿ ಹೋರಾಟ ಮಾಡ್ತಿದ್ದಾರೆ.
ಕೇಂದ್ರ ಸರ್ಕಾರ ಹೊಸ ಕಾಯ್ದೆ ತಂದು ರೈತರನ್ನ ಸಂಕಷ್ಟಕ್ಕೆ ದೂಡಿದೆ. ಈ ಹಿಂದೆ ಕೊಟ್ಟ ಭರವಸೆಯನ್ನೂ ಈಡೇರಿಸದೇ ಕಾಲ ಹರಣ ಮಾಡುತ್ತಿದೆ ಹೀಗಾಗಿ ನಾನು ಅವರಿಗೆ ಬೆಂಬಲ ಸೂಚಿಸಿ ಏಕಾಂಗಿ ಹೋರಾಟ ಮಾಡುತ್ತಿದ್ದೇನೆ ಎಂದರು.
ಕೇಂದ್ರ ಸರ್ಕಾರ ದಲ್ಲೇವಲಾ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಹಾಗೇ ಅವರ ಬೇಡಿಕೆ ಈಡೇರಿಸಬೇಕು.ಎಂ.ಎಸ್.ಪಿ. ಕಾನೂನು ಜಾರಿಗೊಳಿಸಿ, ರೈತರನ್ನ ಉಳಿಸಬೇಕು, ಕೇಂದ್ರ ಸರ್ಕಾರ ರೈತರನ್ನ ಉಳಿಸಬೇಕು ಎಂದು ಶಾಸಕ ಪಾಟೀಲ್ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬಿತ್ತಿಪತ್ರ ಹಿಡಿದು ಪಾಟೀಲ್ ಏಕಾಂಗಿ ಪ್ರತಿಭಟನೆ ನಡೆಸಿದರು.
PublicNext
04/01/2025 02:47 pm