ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜೀವಚೈತನ್ಯ ಕೆರೆಗೆ ರಾಸಾಯನಿಕ ವಿಷ ಹರಿಸಿ ನಾಶ!- ಗ್ರಾಮಸ್ಥರ ಆಕ್ರೋಶ

ಆನೇಕಲ್: ಒಂದು ಕಾಲದಲ್ಲಿ ಇಡೀ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಕೆರೆ. ಈಗ ಆ ಕೆರೆಯ ಆಸ್ತಿತ್ವವನ್ನು ನೋಡಿದರೆ ನಿಜಕ್ಕೂ ಬೇಸರ, ನೋವು ಆಗುತ್ತೆ. ಹೌದು! ಜೀವನಾಡಿ ಕೆರೆಯೀಗ ಕೆಮಿಕಲ್ ವಾಟರ್‌ ನಿಂದಾಗಿ ಸಂಪೂರ್ಣವಾಗಿ ಹಾಳಾಗಿ ಗಬ್ಬುನಾತ ಬೀರುತ್ತಿದೆ!

ಒಂದು ಕಡೆ ಅಪಾರ್ಟ್ಮೆಂಟ್ ಮತ್ತು ಕೈಗಾರಿಕಾ ಪ್ರದೇಶಗಳಿಂದ ಬಿಡುವ ಕೆಮಿಕಲ್ ವಾಟರ್. ಮತ್ತೊಂದು ಕಡೆ ನೀರು ಸಂಪೂರ್ಣವಾಗಿ ಕಲುಷಿತಗೊಳ್ಳುವ ಜೊತೆಗೆ ಅಂತರ್ಜಲ ಸಹ ಮಲಿನವಾಗುತ್ತಿದೆ. ಅಂದ್ಹಾಗೆ ಈ ದೃಶ್ಯ ಕಂಡು ಬಂದಿದ್ದು ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಕೃಷ್ಣಪುರ ಕೆರೆಯಲ್ಲಿ.

ಒಂದು ಕಾಲದಲ್ಲಿ ಇಡೀ ಊರಿಗೆ ನೀರನ್ನು ಪೂರೈಕೆ ಮಾಡುತ್ತಿದ್ದ ಕೆರೆ ಈಗ ಸಂಪೂರ್ಣವಾಗಿ ಕೆಮಿಕಲ್ ವಾಟರ್ ನಿಂದ ಕೂಡಿದೆ. ಅಲ್ಲದೆ, ಸುತ್ತಮುತ್ತ ಇರುವ ಅಪಾರ್ಟ್ಮೆಂಟ್ ಎಸ್‌ಟಿಪಿ ಡ್ರೈನೇಜ್ ನೀರು ಬಿಟ್ಟ ಪರಿಣಾಮ ಕೆರೆಯಲ್ಲಿದ್ದ ಮೀನುಗಳ ಮಾರಣಹೋಮವಾಗಿದ್ದು ದುರ್ವಾಸನೆ ಬರುತ್ತಿದೆ. ಇನ್ನು, ಅಪಾರ್ಟ್ಮೆಂಟ್ ಗಳಿಂದ ಬಿಟ್ಟ ನೀರು ಕೆರೆಗೆ ಸೇರುತ್ತಿರುವುದರಿಂದ ಗ್ರಾಮಸ್ಥರು ಅಪಾರ್ಟ್ಮೆಂಟ್ ಮುಂಭಾಗ ಪ್ರತಿಭಟನೆ ನಡೆಸಿದ್ದರು.

ಇಲ್ಲಿನ ಕಾರ್ತಿಕ್ ರೆಡ್ಡಿ ಮಾಲೀಕತ್ವದ ಅಶ್ವಿನಿ ಸೀತಾರಾಮ್ ಅಪಾರ್ಟ್ಮೆಂಟ್ ಮತ್ತು ರಾಮಧನ್ ಕೈಗಾರಿಕಾ ಫ್ಯಾಕ್ಟರಿ, ಮರಸೂರು ಪಾಮ್ ಗ್ರೂಪ್, ರಿಚ್ಮಂಡ್ ಲೇಖ ಅಪಾರ್ಟ್ಮೆಂಟ್, ಸಿಫಾನಿ ಅಪಾರ್ಟ್ಮೆಂಟ್ ಒಳಚರಂಡಿ ನೀರು ಮತ್ತು ಎಸ್ ಟಿಪಿ ರಾಸಾಯನಿಕ ಕೆಮಿಕಲ್ ನೀರು ಕೆರೆ ಸೇರುತ್ತಿದೆ.

ಇಲ್ಲಿನ ಅಪಾರ್ಟ್ಮೆಂಟ್ ಸುತ್ತಮುತ್ತ ಕಾಲುವೆಗಳ ಮೂಲಕ ರಾಸಾಯನಿಕ ನೀರನ್ನು ಕೆರೆಗೆ ಹರಿಸುತ್ತಿರುವ ಪರಿಣಾಮ ಈಗ ಕೆರೆ ಗಬ್ಬೆದ್ದು ಹೋಗಿದೆ. ಇನ್ನು ಕೆಲವರು ಒಳಚರಂಡಿ ನೀರನ್ನು ಕೆರೆಗೆ ಹರಿಸುತ್ತಿದ್ದಾರೆ. ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Edited By : Vinayak Patil
PublicNext

PublicNext

05/01/2025 06:58 pm

Cinque Terre

42.66 K

Cinque Terre

0

ಸಂಬಂಧಿತ ಸುದ್ದಿ