ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 50 ವರ್ಷಗಳ ಸುದೀರ್ಘ ಪಯಣದ ಮೈಲಿಗಲ್ಲು ಸಾಧಿಸಿದ ಸಂಗೀತ - ನೂತನ ಕಾರ್ಪೊರೇಟ್ ಕಚೇರಿ ಉದ್ಘಾಟನೆ

ಹೊಸತನದ ಅನಾವರಣ, ನಾಳೆಗಳ ಸಶಕ್ತೀಕರಣ, ಸಂಗೀತಾ ಮೊಬೈಲ್‌ಗಳ ವಿಭಾಗದಲ್ಲಿ ಭಾರತದ ಮೊಟ್ಟ ಮೊದಲ ವೈಶಿಷ್ಟ್ಯತೆಗಳ ಮಳಿಗೆಯಾಗಿ ಗುರುತಿಸಿಕೊಂಡಿದೆ. 50 ವರ್ಷಗಳ ಸುದೀರ್ಘ ಪಯಣದ ಮೈಲಿಗಲ್ಲು ಸಾಧಿಸಿದೆ. ಈ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ತನ್ನ ನೂತನ ಆಡಳಿತ ಕಚೇರಿ 'ಸಂಗೀತ ವಿಷನ್' ಹಾಗೂ ಹೊಸತನದಿಂದ ಕೂಡಿದ ಅತ್ಯುತ್ತಮ ಮಳಿಗೆ 'ಸಂಗೀತ ಗ್ಯಾಜೇಟ್ಸ್'ಅನ್ನು ಬೆಂಗಳೂರಿನ ಜಯನಗರದಲ್ಲಿ ಜನವರಿ 5ರಂದು ಲೋಕಾರ್ಪಣೆಗೊಳಿಸಿತ್ತು.

'ಸಂಗೀತಾ ಸುವರ್ಣ ಮಹೋತ್ಸವ' ಸಂಭ್ರಮದ ಭವ್ಯ ಸಮಾರಂಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಚಲನಚಿತ್ರ ನಟ ರಮೇಶ್ ಅರವಿಂದ್, ನಂದನ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಆರ್. ರವಿಚಂದರ್, ಜಯನಗರ ಕ್ಷೇತ್ರದ ಶಾಸಕ ಸಿ.ಕೆ ರಾಮಮೂರ್ತಿ, ದಕ್ಷಿಣ ಬೆಂಗಳೂರು ಬಿಜೆಪಿ ಮಾಜಿ ಅಧ್ಯಕ್ಷ ಎನ್.ಆರ್. ರಮೇಶ್, ಅಡ್ಯಾರ್ ಆನಂದ ಭವನದ ವ್ಯವಸ್ಥಾಪಕ ನಿರ್ದೇಶಕ ಕೆ.ಟಿ ವೆಂಕಟೇಶ್ ರಾವ್ ಮೊದಲದವರು ಸಂಭ್ರಮದಲ್ಲಿ ಭಾಗಿಯಾಗಿದರು.

ಇನ್ನು ಇದೀಗ ಸಂಗೀತ ಅಂದ್ರೆ ಕೇವಲ ಮೊಬೈಲ್ ಅಷ್ಟೇ ಅಲ್ಲ, ಸಂಗೀತ ಅಂದ್ರೆ ಫ್ರಿಡ್ಜ್, ವಾಷಿಂಗ್ ಮಷೀನ್, ವಾಚ್, ಸ್ಮಾರ್ಟ್ ಟೂತ್ ಬ್ರಷ್ ಸೇರಿದಂತೆ ಹತ್ತು ಹಲವಾರು ವಿನೂತನ ಗ್ಯಾಜೆಟ್‌ಗಳೊಂದಿಗೆ 'ಸಂಗೀತಾ' ಜನರ ಮುಂದೆ ಬಂದಿದೆ.

ಒಟ್ಟಾರೆ, ಇದೀಗ 'ಸಂಗೀತಾ' ಅಂದ್ರೆ ಕೇವಲ ಮೊಬೈಲ್ ಫೋನ್ ಅಷ್ಟೇ ಅಲ್ಲ, ನಾವು ಪ್ರತಿ ದಿನ ಬಳಿಕೆ ಮಾಡುವ ಗ್ಯಾಜೆಟ್ಸ್‌ಗಳು ದೊರಕುತ್ತವೆ. ಈಗಲೇ 'ಸಂಗೀತಾ' ಮಳಿಗೆಗೆ ಭೇಟಿ ಕೊಡಿ

Edited By : Suman K
PublicNext

PublicNext

06/01/2025 04:30 pm

Cinque Terre

16.51 K

Cinque Terre

0

ಸಂಬಂಧಿತ ಸುದ್ದಿ