ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ 60 ಪರ್ಸೆಂಟ್ ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಕುಮಾರಸ್ವಾಮಿಯವರಿಗೆ ಮೊನ್ನೆ ನಡೆದ ಚುನಾವಣೆಯಲ್ಲಿ ಹಿನ್ನೆಡೆಯಾಗಿದೆ.ಅವರಿಗೆ ಅವರ ಪಕ್ಷದ ಆಸ್ತಿತ್ವಕ್ಕೆ ಧಕ್ಕೆಯಾಗಿದೆ, ಅವರಿಗೆ ಹತಾಶೆ ಶುರುವಾಗಿದೆ. ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ಇದ್ದರೆ ಕೊಡಲಿ ಎಂದು ಸವಾಲು ಹಾಕಿದ್ದಾರೆ.
ಸಂಕ್ರಾಂತಿ ಬಳಿಕ ಅವರ ಪಕ್ಷದಲ್ಲಿ ಎಷ್ಟು ಜನ ಶಾಸಕರು ಉಳಿಯುತ್ತಾರೆ ನೋಡೋಣ. ಆರೋಪದ ಬಗ್ಗೆ ಸಾಕ್ಷಿಗಳಿದ್ದರೆ ಕೊಡಲಿ.ಹಿಂದೆ ಕೆಂಪಣ್ಣ ದೂರು ನೀಡಿದ್ದರು. ಅದಕ್ಕೆ ನಾವು ಆರೋಪ ಮಾಡಿದ್ದೇವೆ ಇವರ ಆರೋಪಕ್ಕೆ ಸಾಕ್ಷಿ ಕೊಡಲಿ ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಸೋಲಿನ ಹತಾಶೆಯಲ್ಲಿದ್ದಾರೆ. ನಿಖಿಲ್ ಬಗ್ಗೆ ನನಗೆ ಸಹಾನುಭೂತಿ ಇದೆ ಎಂದು ಎಂಬಿ ಪಾಟೀಲ್ ತಿಳಿಸಿದರು.
ಸರ್ಕಾರದ ನಡೆಯ ಬಗ್ಗೆ ಗುತ್ತಿಗೆದಾರರ ಅಸಮಾಧಾನ ವಿಚಾರಕ್ಕೆ ಎಂಬಿ ಪಾಟೀಲ್ ರಿಯಾಕ್ಷನ್ ಕೊಟ್ಟರು.ಯಾವ ಗುತ್ತಿಗೆದಾರರು ಅಸಮಾಧಾನರಾಗಿದ್ದಾರೆ ಅಂತವರ ಲಿಸ್ಟ್ ಕೊಡಲಿ. ನಾವು ಕ್ರಮ ಜರುಗಿಸ್ತೇವೆ. ಸುಮ್ಮನೆ ಹಿಟ್ ಆಂಡ್ ರನ್ ಸರಿಯಲ್ಲ. ಪ್ರಿಯಾಂಕ್ ಖರ್ಗೆ ವಿಚಾರದಲ್ಲೂ ಏನು ಮಾಡಿದ್ರು? ಅವರು ಕಂಟ್ರಾಕ್ಟರ್ ಅಲ್ವೋ ಗೊತ್ತಿಲ್ಲ. ನಮ್ಮ ಸರ್ಕಾರದಲ್ಲಿ ಅಂತಾದ್ದೇನಿಲ್ಲ ಎಂದು ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
PublicNext
06/01/2025 02:14 pm