ಹುಬ್ಬಳ್ಳಿ: ಬಿಜೆಪಿ ಈಗಾಗಲೇ ರಾಜಭವನವನ್ನು ಬಿಜೆಪಿ ಹೆಡ್ ಆಫೀಸ್ ಮಾಡಿಕೊಂಡಿದೆ. ಸಭಾಪತಿ ಕಛೇರಿಯನ್ನು ಬಿಜೆಪಿ ತನ್ನ ಪರವಾಗಿರುವಂತೆ ಪ್ರಯತ್ನಿಸುತ್ತಿದೆ. ಅಲ್ಲದೇ ಒಂದು ಸುಳ್ಳನ್ನು ಸಾವಿರ ಬಾರಿ ಹೇಳುವ ಮೂಲಕ ಸತ್ಯ ಮಾಡುವ ಗೋಬೆಲ್ ತಂತ್ರವನ್ನು ಹೊಂದಿದ್ದಾರೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ವೇದವ್ಯಾಸ ಕೌಲಗಿಯವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್.ನಿಂದ ಬಂದಿರುವ ಶಾಸಕ ಸಿ.ಟಿ. ರವಿ ಅವರು, ಒಂದು ಸುಳ್ಳನ್ನು ಸಾವಿರ ಬಾರಿ ಹೇಳುವ ಮೂಲಕ ಸತ್ಯ ಮಾಡುವ ಗೋಬೆಲ್ ತಂತ್ರ ಹೊಂದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಸಂವಿಧಾನಿಕ ಭಾಷೆ ಬಳಕೆಯಲ್ಲಿ ದಾಖಲೆಗಳನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದರೂ ಸಭಾಪತಿಗಳು ಯಾವುದೇ ವಿಡಿಯೋ.. ಆಡಿಯೋ ಸಾಕ್ಷಿ ಇಲ್ಲ, ನಿಮ್ಮ ನಿಮ್ಮ ಆತ್ಮಸಾಕ್ಷಿ ಪ್ರಕಾರ ನಡೆದುಕೊಳ್ಳಿ ಎಂದು ಹೇಳಿ ನ್ಯಾಯ ಮುಗಿಸಿ, ಸದನ ಮುಂದೂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರು ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಸಿ.ಟಿ. ರವಿ ತನ್ನ ಹೇಳಿಕೆ ಪ್ರಸ್ತಾಪಿಸದೇ ಪದೇ ಪದೇ ಪೊಲೀಸರ ಮೇಲೆ ಆರೋಪ, ಯಾವುದೇ ಹಸ್ತಕ್ಷೇಪ ಇಲ್ಲದಿದ್ದರೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರನ್ನು ಪದೇ ಪದೇ ಹೇಳಿದ್ದಾರೆ. ಬಿಜೆಪಿಯವರು ಸಿ.ಟಿ. ರವಿ ಮಹಿಳೆಯರ ಚಾರಿತ್ರ್ಯವಧೆ ಮಾಡಿದ್ದನ್ನು ಮುಚ್ಚಲು ಮೆರವಣಿಗೆ ಮೂಲಕ ರವಿಗೆ ಭಾರಿ ಬೆಂಬಲವಿದೆ ಎಂದು ತೋರಿಸಲು ಪ್ರಯತ್ನಿಸಿದ್ರೆ ವಿನಹ ಸಿ.ಟಿ. ರವಿಯಿಂದ ತಿಳಿದೋ ತಿಳಿಯದೆಯೋ ತಪ್ಪಾಗಿದ್ದರೆ ಪಕ್ಷವೇ ಪ್ರತಿಭಟಿಸುತ್ತೆಂದು ಹೇಳದೆ ಭಂಡತನ ಪ್ರದರ್ಶಿಶಿಸಿದ್ದಾರೆ ಎಂದು ಲೇವಡಿ ಮಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/01/2025 11:33 am