ಚಿಕ್ಕಮಗಳೂರು : ಕಡೂರು ತಹಶೀಲ್ದಾರ್ ಪೂರ್ಣಿಮಾ ಅಮಾನತುಗೊಳಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ರಂಗೇನಹಳ್ಳಿ ಗ್ರಾಮದ ಸರ್ವೇ ನಂಬರ್4 ರಲ್ಲಿ 12ಎಕರೆ 33 ಗುಂಟೆ ಅರಣ್ಯ ಇಲಾಖೆಯ ಜಮೀನನ್ನು ಅಕ್ರಮ ಮಂಜೂರು ಮಾಡಿರುವ ಈ ಸಂಬಂಧ, ಪ್ರಸ್ತುತ ಕಡೂರು ತಹಶೀಲ್ದಾರ್ ಆಗಿರುವ ಪೂರ್ಣಿಮಾರನ್ನು ಅಮಾನತು ಮಾಡಿ ಸರ್ಕಾರ ಕ್ರಮ ಕೈಗೊಂಡಿದೆ.
ನಿವೃತ್ತ ತಹಶೀಲ್ದಾರ್ ಆಗಿರುವ ಧರ್ಮೋಜಿರಾವ್ ಕೂಡ ಇದೇ ಸರ್ವೇ ನಂಬರ್ ರಲ್ಲಿ 4 ಎಕರೆ 30 ಗುಂಟೆ ಜಾಗ ಅಕ್ರಮವಾಗಿ ಮಂಜೂರು ಮಾಡಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸರ್ಕಾರಕ್ಕೆ ವರದಿ ನೀಡಿದ್ದರು ಇದರ ಆಧಾರದ ಮೇಲೆ ಅಮಾನತು ಆದೇಶ ಹೊರ ಬಿದ್ದಿದೆ. ಸದ್ಯ ಅಮಾನತು ಗೊಂಡಿರುವ ತಹಶೀಲ್ದಾರ್ ರ್ಪೂರ್ಣಿಮ ಅವರಿಗೆ ಚಾಮರಾಜನಗರದ ಚುನಾವಣಾ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ.
Kshetra Samachara
04/01/2025 08:30 am