ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: 2023 ಕ್ಕೆ ಹೋಲಿಸಿದರೆ 2024ರಲ್ಲಿ ಅಪರಾಧ ಸಂಖ್ಯೆಗಳು ಇಳಿಮುಖ - ಎಸ್ಪಿ ಡಾ. ವಿಕ್ರಂ ಅಮಟೆ

ಚಿಕ್ಕಮಗಳೂರು: 2023 ಕ್ಕೆ ಹೋಲಿಸಿದರೆ 2024ರಲ್ಲಿ ಅಪರಾಧ ಸಂಖ್ಯೆಗಳು ಇಳಿಮುಖವಾಗಿದೆ ಎಂದು ಚಿಕ್ಕಮಗಳೂರು ಎಸ್ಪಿ ಡಾ.ವಿಕ್ರಂ ಅಮಟೆ ಮಾಹಿತಿ ನೀಡಿದ್ದಾರೆ. ಜಿಲ್ಲಾವಾರು ಅಪರಾಧಗಳ ಸಂಖ್ಯೆ ಮಾಹಿತಿ ಬಿಚ್ಚಿಟ್ಟ ಅವರು ಪೊಲೀಸ್ ಇಲಾಖೆ ಕೈಗೊಂಡ ದಿಟ್ಟ ಕ್ರಮ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿಯಿಂದ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲು ಕಾರಣವಾಗಿದೆ ಎಂದರು. ಐಪಿಸಿ ಮತ್ತು ಬಿಎನ್‌ಎಸ್ ಕಲಂ ಅಡಿಯಲ್ಲಿ 2023ರಲ್ಲಿ 2952 ಪ್ರಕರಣಗಳು ದಾಖಲಾಗಿತ್ತು. 2024ರಲ್ಲಿ 2607 ಪ್ರಕರಣಗಳು ದಾಖಲಾಗಿವೆ. ವಿಶೇಷ ಕಾಯ್ದೆಯಡಿಯಲ್ಲಿ 2013ರಲ್ಲಿ 1298 ಪ್ರಕರಣ ದಾಖಲಾಗಿದ್ದರೇ, 2024ರಲ್ಲಿ 1104 ಪ್ರಕರಣಗಳು ದಾಖಲಾಗಿವೆ. ಭದ್ರತಾ ಕಾಯ್ದೆಯಡಿಯಲ್ಲಿ 2013ರಲ್ಲಿ 1591 ಪ್ರಕರಣ ದಾಖಲಾಗಿದ್ದರೇ, 2024ರಲ್ಲಿ 1804 ಪ್ರಕರಣ ದಾಖಲಾಗಿವೆ. ಮನುಷ್ಯ ಕಾಣೆ ಪ್ರಕರಣ 2013ರಲ್ಲಿ 400 ಪ್ರಕರಣ ದಾಖಲಾಗಿದ್ದರೇ, 2024ರಲ್ಲಿ 389 ಪ್ರಕರಣ ದಾಖಲಾಗಿವೆ.

2023ರಲ್ಲಿ 793 ಅಸ್ವಭಾವಿಕ ಸಾವು ಪ್ರಕರಣ ದಾಖಲಾಗಿತ್ತು. 2024ರಲ್ಲಿ 775 ಪ್ರಕರಣ ದಾಖಲಾಗಿವೆ. 2023ರಲ್ಲಿ 69 ವಂಚನೆ ಪ್ರಕರಣ ದಾಖಲಾಗಿತ್ತು. 2024ರಲ್ಲಿ 55 ವಂಚನೆ ಪ್ರಕರಣಗಳು ದಾಖಲಾಗಿವೆ. ಕೆ.ಪಿ.ಆಕ್ಟ್ ಅಡಿಯಲ್ಲಿ 2023ರಲ್ಲಿ 8712 ಪ್ರಕರಣ ದಾಖಲಾಗಿತ್ತು. 2024ರಲ್ಲಿ 12365 ಪ್ರಕರಣ ದಾಖಲಾಗಿದೆ. ಧೂಮಪಾನ ವಿರುದ್ಧ 2023ರಲ್ಲಿ 1219 ಪ್ರಕರಣ ದಾಖಲಾಗಿತ್ತು. 2024ರಲ್ಲಿ 1852 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. 2023ರಲ್ಲಿ ರಲ್ಲಿ 31 ಕೊಲೆ ಪ್ರಕರಣ ದಾಖಲಾಗಿದ್ದು, 2024ರಲ್ಲಿ 28 ಕೊಲೆ ಪ್ರಕರಣ ದಾಖಲಾಗಿವೆ. 2023ರಲ್ಲಿ 48 ಕೊಲೆಯತ್ನ ಪ್ರಕರಣ ದಾಖಲಾಗಿತ್ತು. 2024ರಲ್ಲಿ 51 ಪ್ರಕರಣ ದಾಖಲಾಗಿದೆ. ಎಂದು ಎಸ್ಪಿ ವಿಕ್ರಂ ಅಮಟೆ ಮಾಹಿತಿ ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

03/01/2025 06:03 pm

Cinque Terre

335.7 K

Cinque Terre

1

ಸಂಬಂಧಿತ ಸುದ್ದಿ