ಚಿಕ್ಕಮಗಳೂರು: ಮದ್ಯ ಸೇವಿಸಿ ಬೇಕಾಬಿಟ್ಟಿ ಕಾರು ಚಾಲನೆ ಮಾಡಿ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು, ಕಾರ್ ನಿಲ್ಲಿಸದೆ ಪರಾರಿಯಾಗುತ್ತಿದ್ದ ಚಾಲಕನನ್ನು ಸ್ಥಳೀಯರು ಚೇಸ್ ಮಾಡಿ ಹಿಡಿದಿದ್ದಾರೆ. ಈ ಘಟನೆ ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿ ನಡೆದಿದೆ.
ಕುಡಿದ ಮತ್ತಿನಲ್ಲಿ ಬ್ರಿಜಾ ಕಾರ್ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಸವಾರನ ಕಾಲು ಮುರಿದಿದೆ. ಮತ್ತೊಬ್ಬನಿಗೆ ಗಾಯಗಳಾಗಿವೆ. ಈ ವೇಳೆ ಕಾರ್ ನಿಲ್ಲಿಸದೆ ಎಸ್ಕೇಪ್ ಆಗುತ್ತಿದ್ದ ಚಾಲಕನನ್ನು ಚೇಸ್ ಮಾಡಿ ಹಿಡಿದಾಗ ಆತನನ್ನು ತಾಲೂಕಿನ ಬಿಗ್ಗದೇವನಹಳ್ಳಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಫುಲ್ ಟೈಟ್ ಆಗಿದ್ದ ಚಾಲಕನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಜಿಲ್ಲಾಸ್ಪತ್ರೆಗೆ ಕರೆತಂದ ಪೊಲೀಸರು ಸ್ಟ್ರೆಚರ್ ಮೇಲೆ ಮಲಗಿಸಿ ಬ್ಯಾಂಡೇಜ್‌ನಲ್ಲಿ ಆತನ ಕೈ ಕಾಲು ಕಟ್ಟಿ ಹಾಕಿ ಕಿಕ್ ಇಳಿಸಿದ್ದಾರೆ.
ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬೇಡಿ ಎಂದು ಪೊಲೀಸರು ಎಷ್ಟೇ ಅರಿವು ಮೂಡಿಸಿದ್ರು ಯಾವುದೇ ಪ್ರಯೋಜನ ವಾಗದೆ ಇರುವುದು ನಿಜಕ್ಕೂ ದುರಂತವೇ ಸರಿ.
PublicNext
06/01/2025 07:50 am