ಚಿಕ್ಕಮಗಳೂರು: ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ವೇಷ ಧರಿಸಿದ್ದ ನಾಲ್ವರ ತಂಡ ಮೂಡಿಗೆರೆ ತಾಲೂಕಿನ ಗ್ರಾಮೀಣ ಪ್ರದೇಶದ ಮನೆಗಳಿಗೆ ತೆರಳಿ ಜನರಿಗೆ ಹೆದರಿಸಿ ಮೋಸ ಮಾಡುತ್ತಿರುವ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು. ಈ ಪ್ರಕರಣದ ಕುರಿತು ವಂಚನೆಗೊಳಗಾದ ರಮೇಶ್ ಗೌಡ ದಂಪತಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ್ದು ಇಂತಹ ವಂಚಕರಿಂದ ಮಲೆನಾಡಿಗರು ಎಚ್ಚರಿಕೆಯಿಂದ ಇರುವಂತೆ ಪಬ್ಲಿಕ್ ನೆಕ್ಸ್ಟ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಶುಕ್ರವಾರ ಇವರ ಮನೆಗೆ ಭೇಟಿ ನೀಡಿದ್ದ ಮೈಲಾರಲಿಂಗ ಸ್ವಾಮಿ ವೇಷಧಾರಿಗಳು 'ಮೈಲಾರ ರಾಜ ಬಂದನಾ' ಎಂದು ನೇರವಾಗಿ ಮನೆಯೊಳಗೆ ನುಗ್ಗಿ 25 ಸಾವಿರ ಹಣ ನೀಡಿದ್ರೆ ನಿಮಗೆ ಒಳ್ಳೇದಾಗುತ್ತೆ ಎಂದು ಪ್ರಸಾದ ನೀಡಿ ಬೇಡಿಕೆ ಇಟ್ಟಿದ್ರಂತೆ. ದೈವ ಭಕ್ತರಾಗಿರುವ ರಮೇಶ್ ಗೌಡ ಕುಟುಂಬ ಅವರ ಮಾತಿಗೆ ಭಯ ಪಟ್ಟು 25 ಆಗಲ್ಲ ಅಂತಾ 5 ಸಾವಿರ ಹಣ ನೀಡಿದ್ದಾರಂತೆ. ಈ ಅನುಭವವನ್ನು ನಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಡ್ಯಾನಿಯವರೊಂದಿಗೆ ಹಂಚಿಕೊಂಡಿದ್ದಾರೆ ನೋಡಿ...
PublicNext
07/01/2025 08:31 am