ಚಿಕ್ಕಮಗಳೂರು: ತಾಯಿ ಜೊತೆಗೆ ಹೋಗುತ್ತಿದ್ದ ನಾಯಿ ಮರಿಯೊಂದು ಆಯಾ ತಪ್ಪಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಯೊಳಕ್ಕೆ ಬಿದ್ದು ಮೇಲೆ ಬರಲಾಗದೆ ಗೋಳಾಡುತ್ತಿದ್ದ ಘಟನೆ ನಗರದ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ.
ಚರಂಡಿ ಮೇಲಿಂದ ತನ್ನ ಮರಿಯನ್ನು ಕಂಡು ತಾಯಿ ನನ್ನ ಕಂದನನ್ನು ರಕ್ಷಿಸಿ ಎಂದು ಗೋಗರೆಯುತ್ತಿತ್ತು. ತನ್ನ ಮರಿಗಾಗಿ ಪರಿತಪ್ಪಿಸುತ್ತಿದ್ದ ತಾಯಿಯನ್ನು ಕಂಡ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿಗಳು ಡ್ರೈನೇಜ್ ಸ್ಲಾಬ್ ಮೇಲಕ್ಕೆತ್ತಿ ನೋಡಿದಾಗ ಹರಿಯುತ್ತಿದ್ದ ಕೊಳಚೆ ನೀರಿನ ನಡುವೆ ಅಲ್ಲಿದ್ದ ಪೈಪ್ ಸಹಾಯದಿಂದ ನಾಯಿ ಮರಿ ನಿಂತಿತ್ತು. ನಂತರ ಅಗ್ನಿಶಾಮಕ ಸಿಬ್ಬಂದಿ ಡ್ರೈನೇಜ್ ಒಳಗೆ ಇಳಿದು ನಾಯಿಮರಿಯನ್ನು ರಕ್ಷಿಸಿದ್ದಾರೆ. ಚರಂಡಿಯಿಂದ ಮೇಲಕ್ಕೆತ್ತಿ ಹಾಲನ್ನು ಕುಡಿಸಿ ಆರೈಕೆ ಮಾಡಿ ಅಮ್ಮನ ಜೊತೆಗೆ ಬಿಟ್ಟಿದ್ದಾರೆ. ಡ್ರೈನೇಜ್ ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಯಿಮರಿಯನ್ನು ರಕ್ಷಿಸಿದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
05/01/2025 12:43 pm