ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಹಾಡಗಲೇ ಪ್ರತ್ಯಕ್ಷವಾಗುತ್ತಿರುವ ಕಾಡನೆಗಳು ಜನರಲ್ಲಿ ಆತಂಕ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಾಡನೆಗಳ ಉಪಟಳ ಮಿತಿ ಮೀರಿ ಹೋಗಿದೆ. ನರಸಿಂಹರಾಜಪುರ ತಾಲೂಕಿನ ಜೇನುಕಟ್ಟೆಸರ ಎಂಬ ಗ್ರಾಮದಲ್ಲಿ ಹಾಡಗಲೇ ಕಾಡನೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ. ಸದ್ಯ ಮಲೆನಾಡಿಲ್ಲಿ ಕಾಫಿ, ಭತ್ತದ ಕಟಾವು ಕಾರ್ಯನಡೆಯುತ್ತಿದ್ದು ಕಾಫಿ ಬೆಳೆಗಾರರು, ರೈತರು ಕಾಡನೆಗಳ ಹಾವಳಿಗೆ ಬೇಸತ್ತು ಹೋಗಿದ್ದಾರೆ.

ಕಾರ್ಮಿಕರು ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದು ಒಂದು ತಿಂಗಳ ಹಿಂದಷ್ಟೇ ಆನೆ ದಾಳಿಗೆ ತಾಲೂಕಿನಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ. ತಾಲೂಕಿನಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವಂತೆ ಈಗಾಗಲೇ ಅರಣ್ಯ, ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Edited By : PublicNext Desk
PublicNext

PublicNext

07/01/2025 03:57 pm

Cinque Terre

16.86 K

Cinque Terre

0

ಸಂಬಂಧಿತ ಸುದ್ದಿ