ಚಿಕ್ಕಮಗಳೂರು: ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದಿದ್ದ ಕಡವೆ ಮರಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಸಗೋಡು ಗ್ರಾಮದಲ್ಲಿ ನಡೆದಿದೆ. ಹೆಸಗೋಡು ಕಾಂಡಂಚಿನ ಗ್ರಾಮವಾಗಿದ್ದು ಕಾಡಿನ ಪಕ್ಕದಲ್ಲೇ ಇರುವುದರಿಂದ ಕಾಡುಹಂದಿ, ಕಡವೆ, ಕಾಡುಕುರಿ ಸೇರಿ ಅನೇಕ ಪ್ರಾಣಿಗಳು ಕಾಡಂಚಿನಲ್ಲೇ ಇರುತ್ತವೆ. ಆದರೆ, ಕಡವೆಯ ಮರಿಯೊಂದು ನೀರು ಹುಡುಕಿಕೊಂಡು ಹೆಸಗೋಡು ಗ್ರಾಮಕ್ಕೆ ಬಂದಿತ್ತು. ನೀರು ಕುಡಿಯುವ ವೇಳೆ ಬೀದಿನಾಯಿಗಳು ಕಡವೆ ಮರಿ ಅಟ್ಟಿಸಿಕೊಂಡು ಹೋಗಿ ಕಚ್ಚಿದ್ದವು. ಆದರೆ, ಬೀದಿನಾಯಿಗಳಿಂದ ತಪ್ಪಿಸಿಕೊಂಡು ಕಾಫಿತೋಟ ನಿತ್ರಾಣವಾಗಿ ನಿಂತಿತ್ತು. ಬೀದಿ ನಾಯಿಗಳು ಕಡಮೆ ಮರಿಯನ್ನ ಅಟ್ಟಿಸಿಕೊಂಡು ಹೋಗಿದ್ದನ್ನ ಕಂಡ ಸ್ಥಳಿಯರು ಹಾಗೂ ಅಕ್ಷತಾ ಮದನ್ ದಂಪತಿಗಳುಕೂಡ ಹಿಂದೆಯೇ ಹೋಗಿ ಬೀದಿ ನಾಯಿಗಳಿಂದ ಕಡವೆ ಮರಿಯನ್ನ ರಕ್ಷಿಸಿ. ತೋಟದಲ್ಲೇ ನೀರು ಕುಡಿಸಿ, ಸಂತೈಸಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಕಡವೆ ಮರಿಯನ್ನ ಜೀಪಿನಲ್ಲಿ ಕರೆದೊಯ್ದು ಅರಣ್ಯಕ್ಕೆ ಬಿಟ್ಟಿದ್ದಾರೆ.
Kshetra Samachara
05/01/2025 04:15 pm