ಮೊಳಕಾಲ್ಮುರು:ಪಟ್ಟಣದ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಅಕ್ಷರದವ್ವ ಮಾತೆ ಸಾವಿತ್ರಿ ಬಾ ಪುಲೆ ಜನ್ಮದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಲೋಕಾಯುಕ್ತ ಇನ್ಸ್ಪೆಕ್ಟರ್ ಜಿಬಿ ಉಮೇಶ್ ಮಾತನಾಡಿ,ಸಮಾಜದಲ್ಲಿ ಸಮಾನ ಶಿಕ್ಷಣ ನೀಡಲು ಸತ್ಯ, ನ್ಯಾಯಯುತವಾಗಿ ಹೋರಾಡಿದ ಸಾವಿತ್ರಿ ಬಾಯಿ ಪುಲೆ ಅವರು ನೋವನ್ನು ನುಂಗಿ ಸಮಾಜ ಆರೋಗ್ಯಪೂರ್ಣವಾಗಿರಲು ಶಿಕ್ಷಣ ಅತ್ಯವಶ್ಯಕವೆಂದು ಪ್ರತಿಪಾದಿಸಿದರು. ಪುಲೆ ಅವರ ಆಶಯದಂತೆ ತಳ ಸಮುದಾಯ, ಗ್ರಾಮಗಳಲ್ಲಿ, ಕೆಳಹಂತದ ಜನರಲ್ಲಿ ಶಿಕ್ಷಣದ ಸಂಘಟನೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗದ ಜನರಿಗೆ, ಹೆಣ್ಣು ಮಕ್ಕಳಿಗೆ ಮೂಲಭೂತ ಶಿಕ್ಷಣ ನೀಡುವಲ್ಲಿ ಸಂಘಟನೆಗಳು ಕಾರ್ಯ ನಿರ್ವಹಿಸಬೇಕು,'' ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಶಿಕ್ಷಕರಿಗೆ ಮಾತೆ ಸಾವಿತ್ರಿ ಬಾ ಪುಲೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಿಸ್ವಾಮಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಿಪಿಐ ವಸಂತ ಆಸೋದೆ,ಪಿಎಸ್ಐ ಪಾಂಡುರಂಗಪ್ಪ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಗೌರವಾಧ್ಯಕ್ಷ ಕೆ ಎಚ್ ಸಣ್ಣ ಯಲ್ಲಪ್ಪ, ಡಿಎಸ್ಎಸ್ ಸಂಚಾಲಕರಾದ ಚಿಕ್ಕೋಬನಹಳ್ಳಿ ಕರಿಬಸಪ್ಪ ಮತ್ತು ರುದ್ರಯ್ಯ ಕಾರ್ಯಕ್ರಮದ ಆಯೋಜಕಾರದ ಪರಮೇಶ್ ಮತ್ತು ಕೋನಸಾಗರ ತಿಪ್ಪೇಶ್ ಸೇರಿದಂತೆ ಹಲವರಿದ್ದರು.
Kshetra Samachara
03/01/2025 03:01 pm