ಸಾಗರ : ಇಲ್ಲಿನ ಸಹೃದಯ ಬಳಗ, ತಾಲ್ಲೂಕು ಇತಿಹಾಸ ವೇದಿಕೆ ಆಶ್ರಯದಲ್ಲಿ 24ನೇ ವರ್ಷದ ಸಾಗರೋತ್ಸವ ಅಂಗವಾಗಿ ಜ. 5ರಂದು ಬೆಳಿಗ್ಗೆ 9-30ಕ್ಕೆ ಗಾಂಧಿ ಮೈದಾನದ ನಗರಸಭೆ ಆವರಣದಲ್ಲಿ ಮಲೆನಾಡಿನ ಚಿತ್ತಾರದ ಸಾಕ್ಷಿಪ್ರಜ್ಞೆ ಶೀರ್ಷಿಕೆಯಡಿ ಭೂಮಣ್ಣಿಬುಟ್ಟಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಸಿರಿವಂತೆ ಉದ್ಘಾಟಿಸಲಿದ್ದಾರೆ. ಲೋಕೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯಲ್ಲಿ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಎನ್.ಲಲಿತಮ್ಮ, ಪ್ರಮುಖರಾದ ಉಮೇಶ್ ಹಿರೇನೆಲ್ಲೂರು, ರಮೇಶ್ ಈ. ಕೆಳದಿ, ಅಶೋಕ್ ಬೇಳೂರು, ದಿನೇಶ್ ಬರದವಳ್ಳಿ, ಎಲ್.ಚಂದ್ರಪ್ಪ, ವೆಂಕಟೇಶ್ ಮೆಳವರಿಗೆ, ರಾಮಚಂದ್ರ ಸಾಗರ, ಚೌಡಮ್ಮ ಪಾಲ್ಗೊಳ್ಳಲಿದ್ದಾರೆ.
ಭೂಮಣ್ಣಿ ಬುಟ್ಟಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ. 2000 (ಪ್ರಥಮ), ರೂ. 1500 (ದ್ವಿತೀಯ), ರೂ. 750 (ತೃತೀಯ) ಬಹುಮಾನ ನೀಡಲಾಗುತ್ತದೆ. ನೈಸರ್ಗಿಕ ಬಣ್ಣದಿಂದ ಮನೆಯಲ್ಲಿಯೆ ರಚಿಸಿದ ದೊಡ್ಡ ಭೂಮಣ್ಣಿ ಒಂದು ಬುಟ್ಟಿಯನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಸ್ಥಳದಲ್ಲಿಯೆ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.
Kshetra Samachara
02/01/2025 04:59 pm