ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಕೋಳಿ ಪಂದ್ಯ ಜೂಜಾಟ - 9 ಮಂದಿ ಬಂಧನ, 3 ಕೋಳಿ ಜಪ್ತಿ

ಚಿತ್ರದುರ್ಗ: ಬಸ್ತಿಹಳ್ಳಿ ಗ್ರಾಮದ ಬಳಿ ಕೋಳಿ ಜೂಜು ಅಡ್ಡೆಯ ಮೇಲೆ ಭರಮಸಾಗರ ಠಾಣೆ ಪೊಲೀಸರ ದಾಳಿ ನಡೆಸಿದ್ದಾರೆ. ದಾಳಿ ವೇಳೆ 9 ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ 13010 ರೂಪಾಯಿ ನಗದು, 3 ಕೋಳಿಗಳನ್ನು ಜಸ್ತಿ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಬಸ್ತಿಹಳ್ಳಿ ಗ್ರಾಮದ ಹೊರವಲಯದಲ್ಲಿ ಜಮೀನುವೊಂದರಲ್ಲಿ ದಾಳಿ ಮಾಡಲಾಗಿದ್ದು, ಗಂಗಪ್ಪ, ಗೋವಿಂದ, ಕಿರಣ್, ಸತೀಶ್ ಸೇರಿ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಕೋಳಿ ಜೂಜಾಟದ ಕುರಿತು ಖಚಿತ ಮಾಹಿತಿ ಆಧರಿಸಿ, ಭರಮಸಾಗರ ಪೊಲೀಸ್ ಠಾಣೆ

ಪಿಐ ಪ್ರಸಾದ್, ಪಿಎಸ್ಐ ಸುರೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Suman K
Kshetra Samachara

Kshetra Samachara

02/01/2025 02:13 pm

Cinque Terre

4.42 K

Cinque Terre

0

ಸಂಬಂಧಿತ ಸುದ್ದಿ