ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೀರ್ಥಹಳ್ಳಿಯಲ್ಲಿ ವೈಭವದ ತೆಪ್ಪೋತ್ಸವ, ಕಣ್ತುಂಬಿಕೊಂಡರು ಸಾವಿರ ಸಾವಿರ ಜನ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಯ ತುಂಗಾ ನದಿ ದಂಡೆ ಮೇಲೆ ಎಳ್ಳಮವಾಸ್ಯೆಯ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ತೆಪ್ಪೋತ್ಸವ ಸಂದರ್ಭ ಬಾನಂಗಳದಲ್ಲಿ ಸಿಡಿಮದ್ದುಗಳ ಆಕರ್ಷಕ ಚಿತ್ತಾರ ಜನರ ಕಣ್ಮನ ಸೆಳೆಯಿತು.

ತುಂಗಾ ನದಿಯಲ್ಲಿ ಶ್ರೀರಾಮೇಶ್ವರ ದೇವರ ಉತ್ಸವಮೂರ್ತಿಯ ಆಕರ್ಷಕ ತೆಪ್ಪೋತ್ಸವ ನಡೆಯಿತು. ದೇವರ ತೆಪ್ಪವನ್ನು ವಿಭಿನ್ನವಾಗಿ ಅಲಂಕರಿಸಲಾಗಿತ್ತು. ತೆಪ್ಪೋತ್ಸವ ಆರಂಭಾಗುತ್ತಿದ್ದಂತೆ ಜನರು ಭಕ್ತಿಯಿಂದ ದೇವರಿಗೆ ನಮಿಸಿದರು.

ರಾಮ ದೇವರಿಗೆ ತೆಪ್ಪೋತ್ಸವದ ದೀಪ ಬೆಳಗುತ್ತಿದ್ದಂತೆ ಸಿಡಿಮದ್ದು ಪ್ರದರ್ಶನ ಆರಂಭವಾಯಿತು. ಬಹು ಹೊತ್ತು ಸಿಡಿಮದ್ದುಗಳು ಆಗಸದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸಿದವು. ಜನ ಈ ವೈಭವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.

ಶ್ರೀರಾಮೇಶ್ವರ ದೇವರ ಜಾತ್ರೆಯ ಪ್ರಮುಖ ಆಕರ್ಷಣೆ ತೆಪ್ಪೋತ್ಸವ ಮತ್ತು ಸಿಡಿಮದ್ದು ಪ್ರದರ್ಶನ. ಇದನ್ನು ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯ ಜನರು ತುಂಗಾ ನದಿಯ ದಂಡೆ ಮೇಲೆ ಸೇರಿದ್ದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು. ಪಟಾಕಿ ಸಿಡಿದಾಗ ಜನರು ಸಂಭ್ರಮಿಸುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇನ್ನು, ಶೋಕಾಚರಣೆ ಹಿನ್ನೆಲೆ ಈ ಬಾರಿ ವೇದಿಕೆ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಶಾಸಕ ಆರಗ ಜ್ಞಾನೇಂದ್ರ, ಎಂಎಡಿಬಿ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ ಸೇರಿ ಹಲವರು ಜಾತ್ರೆಯಲ್ಲಿ ಭಾಗವಹಿಸಿದ್ರು

Edited By : Nagesh Gaonkar
PublicNext

PublicNext

02/01/2025 02:07 pm

Cinque Terre

57.57 K

Cinque Terre

0

ಸಂಬಂಧಿತ ಸುದ್ದಿ