ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ರುದ್ರಣ್ಣ ಆತ್ಮಹತ್ಯೆ ಕೇಸ್‌ : ಕೆಲಸಕ್ಕೆ ಹಾಜರಾದ ಎ1 ಆರೋಪಿ ತಹಶೀಲ್ದಾರ

ಬೆಳಗಾವಿ : ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ನ.5 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಎಸ್ ಡಿಸಿ ರುದ್ರಣ್ಣ ಪ್ರಕರಣದ ಎ1 ಆರೋಪಿಯಾಗಿರುವ ತಹಶೀಲ್ದಾರ ಬಸವರಾಜ್ ನಾಗರಾಳ ಕೆಲಸಕ್ಕೆ ಹಾಜರಾಗಿದ್ದಾರೆ.‌

ಬೆಳಗಾವಿ ತಹಶೀಲ್ದಾರ ಕಚೇರಿಯಲ್ಲಿ ಎಸ್ ಡಿ ಸಿ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಎರಡು ತಿಂಗಳ ಬಳಿಕ ಎ1 ಆರೋಪಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.‌ ಪ್ರಕರಣ ದಾಖಲಾದ ಹಿನ್ನಲೆ ಎಸ್ಕೇಪ್ ಆಗಿದ್ದ ಆರೊಪಿ ತಹಶೀಲ್ದಾರ ಈಗ ಜಾಮೀನಿನ ಮೇಲೆ ಬಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಒಂದೆಡೆ ಆತ್ಮಹತ್ಯೆ ಪ್ರಕರಣ ತನಿಖೆ ನಡೆಯುತ್ತಿದ್ದು, ಇನ್ನೊಂದಡೆ ಕುಟುಂಬಸ್ಥರು ನ್ಯಾಯಕ್ಕಾಗಿ ಅಲೆದಾಟ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರರ ಮೇಲೆ ರುದ್ರಣ್ಣ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು.‌ ಈ ನಡುವೆ ಕೆಲಸಕ್ಕೆ ಹಾಜರಾದ ತಹಶೀಲ್ದಾರ ವಿರುದ್ಧ ಸಾರ್ವಜನಿಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Edited By : Nagesh Gaonkar
PublicNext

PublicNext

01/01/2025 08:32 pm

Cinque Terre

99.14 K

Cinque Terre

0

ಸಂಬಂಧಿತ ಸುದ್ದಿ