ಬೆಳಗಾವಿ: ನೈಋತ್ಯ ರೈಲ್ವೆ ವತಿಯಿಂದ ರೈಲು ಸಂಖ್ಯೆ 20670 ಪುಣೆ- ಎಸ್‌ಎಸ್‌ಎಎಸ್ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಜನವರಿ 2 ರಂದು ಸಂಜೆ 7 ಗಂಟೆಗೆ ಘಟಪ್ರಭಾ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿ ಹಸಿರು ನಿಶಾನೆ ತೋರುವರು. ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಭಾಗವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ವಿಧಾನ ಸಭೆ ಸದಸ್ಯರಾದ ರಮೇಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ, ಚನ್ನರಾಜ್ ಹಟ್ಟಿಹೊಳಿ, ಹನಮಂತ ನಿರಾಣಿ, ಡಾ.ತಳವಾರ ಸಾಬಣ್ಣ, ಲಖನ್ ಜಾರಕಿಹೊಳಿ ಹಾಗೂ ಎಂ.ನಾಗರಾಜು ಅವರು ಆಗಮಿಸುವರು.
Kshetra Samachara
01/01/2025 06:24 pm