ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಂಭಾಜಿ ಮಹಾರಾಜರ ಪುತ್ಥಳಿ ಉದ್ಘಾಟನೆ ಜಟಾಪಟಿ- "ನನಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ" ಎಂದ ಮೇಯರ್‌

ಬೆಳಗಾವಿ: ಬೆಳಗಾವಿಯಲ್ಲಿ ಸಂಭಾಜಿ ಮಹಾರಾಜರ ಪುತ್ಥಳಿ ಉದ್ಘಾಟನೆಯ ಜಟಾಪಟಿ ನಡೆದಿದ್ದು, ಸ್ಥಳೀಯರ ವಿರೋಧದ ನಡುವೆಯೂ ಹೋಮ ಕಾರ್ಯಕ್ರಮದಲ್ಲಿ ಮೇಯರ್ ಸವಿತಾ ಕಾಂಬಳೆ ಭಾಗಿ ಆಗಿದ್ದಾರೆ.‌

ಬೆಳಗಾವಿಯ ಅನಗೋಳದಲ್ಲಿ ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡುವ ವಿಚಾರವಾಗಿ ಶಾಸಕ ಅಭಯ್ ಪಾಟೀಲ್ ಮತ್ತು ರಮಾಕಾಂತ ಕೊಂಡುಸ್ಕರ್ ಬೆಂಬಲಿಗರ ನಡುವೆ ಜಟಾಪಟಿ ಶುರುವಾಗಿದ್ದು, ಪುತ್ಥಳಿ ಕೆಳಗಡೆ ಇರುವ ಸಭಾಭವನದಲ್ಲಿ ಹೋಮ ಹವನ ನೆರವೇರಿದೆ. ಈ ವೇಳೆ ಮೇಯರ್‌ ಸವಿತಾ ಕಾಂಬಳೆಗೆ ಡೆಪ್ಯುಟಿ ಮೇಯರ್ ಆನಂದ ಚೌಹಾಣ್ ಹಾಗೂ ಪಾಲಿಕೆ ಸದಸ್ಯರು ಸಾಥ್ ನೀಡಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮೇಯರ್ ಸವಿತಾ ಕಾಂಬಳೆ ಮಾತನಾಡಿದ್ದು, ಪೂರ್ವ ನಿಗದಿಯಂತೆ ಸಂಭಾಜಿ ಮಹಾರಾಜರ ಪುತ್ಥಳಿ ಉದ್ಘಾಟನೆ ಜನವರಿ 5ರಂದು ಮಾಡಲಾಗುತ್ತದೆ.‌ ಇಂದು ಸಭಾಭವನದಲ್ಲಿ ಹೋಮ ನಡೆಯುತ್ತಿದೆ.‌ ಸ್ಥಳೀಯರಿಗೂ ಆಹ್ವಾನ ನೀಡಲಾಗಿತ್ತು, ನನಗೆ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಪುತ್ಥಳಿ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿತ್ತು ಎಂದು ತಿಳಿಸಿದರು.

Edited By : Ashok M
PublicNext

PublicNext

03/01/2025 07:44 am

Cinque Terre

34.6 K

Cinque Terre

0

ಸಂಬಂಧಿತ ಸುದ್ದಿ