ಚಿಕ್ಕಮಗಳೂರು: ಇಂದಿನ ಆಹಾರ ಪದ್ಧತಿಯಿಂದ ಮನುಷ್ಯನ ಆರೋಗ್ಯ ಸ್ಥಿತಿ ಹಂತ ಹಂತವಾಗಿ ಹದಗೆಡುತ್ತಿದೆ. ಅಲ್ಪಾಯುಷ್ಯಕ್ಕೆ ಯುವ ಸಮೂಹ ಹೃದಯಘಾತದಂಥ ಮಾರಕ ಕಾಯಿಲೆಗೆ ತುತ್ತಾಗಿ ಅಕಾಲಿಕ ಸಾವು ಸಂಭವಿಸುತ್ತಿದೆ. ಹೀಗಾಗಿ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿದರೆ ಶೀಘ್ರ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಡಾ.ಸುಂದರ್ ಗೌಡ ತಿಳಿಸಿದರು. ತಾಲ್ಲೂಕಿನ ಹಿರೇಗೌಜ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನೇಚರ್ ಕನ್ಸರ್‌ವೇಷನ್ ಟ್ರಸ್ಟ್, ವಿಜಯ ಡೆಂಟಲ್ ಇಂಟರ್‌ನ್ಯಾಷನಲ್, ಪ್ರಸಾದ್ ನೇತ್ರಾಲಯ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ಧ ಉಚಿತ ಕಣ್ಣಿನ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಮಾನವನ ಶರೀರದಲ್ಲಿ ಕಣ್ಣು ಅತ್ಯಂತ ಅಮೂಲ್ಯವಾದ ಅಂಗ. ಸುರಕ್ಷತೆ, ಕಾಳಜಿಯಿಂದ ಕಾಪಾಡುವಲ್ಲಿ ನಿರ್ಲಕ್ಷ್ಯವಹಿಸಿದರೆ ಅಂಧತ್ವ ಸಂಭವಿಸಬಹುದು ಎಂದು ಎಚ್ಚರಿಸಿದರು. ಪೊರೆ ಅಥವಾ ದೃಷ್ಟಿ ದೋಷದ ಸಣ್ಣಪುಟ್ಟ ತೊಂದರೆಗೆ ಸಿಲುಕಿದರೆ ಶೀಘ್ರವೇ ಚಿಕಿತ್ಸೆ ನೀಡಬೇಕು ಎಂದು ಸಲಹೆ ಮಾಡಿದರು.
Kshetra Samachara
01/01/2025 06:14 pm