ಹುಕ್ಕೇರಿ: ಕಾರು ಸಮೇತ ನದಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮ ಬಳಿಯ ಘಟಪ್ರಭಾ ನದಿಯಲ್ಲಿ ನಡೆದಿದೆ.
ಕಿರಣ ಲಕ್ಷ್ಮಣ ನಾವಲಗಿ 45 ಮೃತ ದುರ್ದೈವಿ. ಮೃತ ಕಿರಣ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ನಿವಾಸಿ. ಬ್ಯೂಟಿ ಪಾರ್ಲರ್ ಉದ್ಯಮ ನಡೆಸುತ್ತಿದ್ದ ಮೃತ ಕಿರಣ್ ಡಿಸೆಂಬರ್ 30ರಂದು ಮನೆಯಲ್ಲಿ ಯಾರಿಗೂ ಹೇಳದೇ ಕಾರ್ ತೆಗೆದುಕೊಂಡು ತೆರಳಿದ್ದ.
ಉದ್ಯಮದಲ್ಲಿ ನಷ್ಟಗೊಂಡ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ನದಿಯಲ್ಲಿ ಬಿದ್ದಿದ್ದ ಕಾರು ಹಾಗೂ ಶವವನ್ನ ಹೊರತೆಗೆದಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
01/01/2025 04:51 pm