ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸ್ಕೂಲ್ ಬ್ಯಾಗ್ ತರಲು‌ ನಿರಾಕರಿಸಿದ್ದಕ್ಕೆ ಸಹಪಾಠಿಗಳಿಂದ ಚಾಕು ಇರಿತ

ಬೆಳಗಾವಿ: ಗೋಕಾಕ ನಗರದಲ್ಲಿರುವ ಸರಕಾರಿ ಪ್ರೌಢಶಾಲೆಯ ಪಕ್ಕದಲ್ಲಿರುವ ವಾಲ್ಮೀಕಿ ಮೈದಾನದಲ್ಲಿ ಮೂವರು ವಿದ್ಯಾರ್ಥಿಗಳು ಸೇರಿ ಓರ್ವ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ನಡೆದಿದೆ.

ಸಂಜೆ ಶಾಲೆ ಬಿಟ್ಟ ನಂತರ 10ನೇ ತರಗತಿಯಲ್ಲಿ ಓದುತ್ತಿದ್ದ ಪ್ರದೀಪ ಬಂಡಿವಡ್ಡರ ಎಂಬಾತನಿಗೆ ಅದೇ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತಿದ್ದ ಮೂವರು ಸಹಪಾಠಿಗಳು ಸೇರಿ ಚಾಕು ಇರಿದಿದ್ದಾರೆ. ಪ್ರದೀಪನಿಗೆ ಈ ಮೂವರು ತಮ್ಮ ಬ್ಯಾಗ್ ತರಲು ಹೇಳಿದ್ದರು. ಆಗ ಆತ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡು ಕುತ್ತಿಗೆ, ಕೈ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ನರಳಾಡುತಿದ್ದ ಗಾಯಾಳು ಪ್ರದೀಪ್‌ನನ್ನು ಸ್ಥಳೀಯ ಶಿಕ್ಷಕರು ಗೋಕಾಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ವಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಗರ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿ ಹಲ್ಲೆಗೊಳಗಾದವನಿಂದ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ವಲು ಪೊಲೀಸರು ಬಲೆ ಬೀಸಿದ್ದು, ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Ashok M
PublicNext

PublicNext

03/01/2025 08:40 am

Cinque Terre

40.59 K

Cinque Terre

0