ಸಾಗರ : ನಾಡಿನ ಸಂಸ್ಕೃತಿಯ ಪ್ರತೀಕ ಅಮರಶಿಲ್ಪಿ ಜಕಣಾಚಾರಿ. ಅವರ ಕಲೆಯ ಶಕ್ತಿ ಅದ್ಭುತವಾದದ್ದು ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ತಿಳಿಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಕಣಾಚಾರಿ ಜೀವನವನ್ನು ಅತ್ಯಂತ ಅಮೂಲ್ಯವಾದದ್ದು. ನಾಡಿನ ಅನೇಕ ಕಲಾಕೆತ್ತನೆಗಳಲ್ಲಿ ನಾವು ಜಕಣಾಚಾರಿಯವರ ಕರಕುಶಲತೆಯನ್ನು ಕಾಣುತ್ತೇವೆ. ಬೇಲೂರು, ಹಳೆಬೀಡು ಸೇರಿದಂತೆ ಅನೇಕ ದೇವಸ್ಥಾನಗಳು, ವಾಸ್ತುಶಿಲ್ಪಗಳ ರೂವಾರಿ ಅಮರ ಶಿಲ್ಪಿ ಜಕಣಾಚಾರಿಯಾಗಿದ್ದಾರೆ. ಅಂತಹ ಸ್ಮಾರಕಗಳನ್ನು ನಾವು ಉಳಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಅಮರಶಿಲ್ಪಿ ಜಕಣಾಚಾರಿ ಕುರಿತು ಉಪನ್ಯಾಸ ನೀಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ನಾಡಿನ ಭವ್ಯ ಪರಂಪರೆಯನ್ನು ಬಿಂಬಿಸುವ ಕೆತ್ತನೆಗಳು ಜಕಣಾಚಾರಿ ಅವರಿಂದ ಬಂದಿದೆ. ಅವರ ಕೆತ್ತನೆಗಳು ಇತಿಹಾಸದ ಪುಟದಲ್ಲಿ ದಾಖಲಾಗಿದ್ದು, ಜಗತ್ತಿನ ಗಮನ ಸೆಳೆಯುತ್ತಿವೆ. ಕಲೆಯ ಮೂಲಕ ಅಮರತ್ವವನ್ನು ಪಡೆದ ಮಹಾನ್ ಚೇತನ ಅವರಾಗಿದ್ದಾರೆ ಎಂದರು.
ಉಪ ತಹಶೀಲ್ದಾರ್ ಚಂದ್ರಶೇಖರ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಂಜುನಾಥ ಆಚಾರಿ, ಸಿ.ಟಿ.ಬ್ರಹ್ಮಚಾರ್, ಶಾಂತಮೂರ್ತಿ ಇನ್ನಿತರರು ಹಾಜರಿದ್ದರು.
Kshetra Samachara
01/01/2025 04:16 pm