ಶಿವಮೊಗ್ಗ: ಅಮರಶಿಲ್ಪಿ ಜಕಣಾಚಾರಿಯವರ ಕೆಲಸಗಳು, ಶಿಲ್ಪಕಲಾಕೃತಿಗಳು ಕಾಲವನ್ನು ಹಿಮ್ಮೆಟ್ಟಿಸುಂತಿವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜಯಂತಿ ಆಚರಣೆ ಸರಳವಾಗಿರಲಿ ಅಥವಾ ವಿಜೃಂಭಣೆಯಿಂದ ನಡೆಯಲಿ ಜಕಣಾಚಾರಿಯಂತಹ ಮಹಾನ್ ಶಿಲ್ಪಿಯ ಕೆಲಸಗಳು, ಅವರ ಮಹತ್ವ ಅರಿಯಲು ತೊಂದರೆಯಾಗುವುದಿಲ್ಲ. ಅತ್ಯಂತ ಶ್ರದ್ದೆ ಮತ್ತು ನೈಪುಣ್ಯತೆಯಿಂದ ಅವರು ರಚಿಸಿರುವ ಶಿಲ್ಪಾಕೃತಿಗಳು, ದೇವಸ್ಥಾನಗಳು ಕಾಲವನ್ನು ಹಿಮ್ಮೆಟ್ಟಿಸುತ್ತವೆ ಎಂದರು. ಉತ್ತಮ ರಾಷ್ಟ್ರ ಕಟ್ಟಲು ಇಂತಹ ಸಾವಿರಾರು ಜಕಣಾಚಾರಿಗಳು ನಮಗೆ ಬೇಕು. ಜಕಣಾಚಾರಿಯವರು ನಮಗೆ ಎಂದಿಗೂ ಸ್ಪೂರ್ತಿಯಾಗಿದ್ದಾರೆ ಎಂದರು.
PublicNext
01/01/2025 01:05 pm