ಚಿತ್ರದುರ್ಗ: ಕಾಲುವೆಹಳ್ಳಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ನಡೆದಿದ್ದು ಭಾಗ್ಯಮ್ಮ, ಮಧು ಸೇರಿದಂತೆ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗ್ರಾಮದ ಸರ್ವೆ ನಂ 111 ರಲ್ಲಿ ಭಾಗ್ಯಮ್ಮ ಅವರು ನಾಲ್ಕು ಎಕರೆ ಜಮೀನು ಹೊಂದಿದ್ದು ಪಕ್ಕದ ಗುಡ್ಡ ರಂಗಪ್ಪ ವಂಶಸ್ಥರು, ಈ ಜಮೀನು ತಮಗೆ ಸೇರಿದ್ದು ಎಂದು ಕ್ಯಾತೆ ತೆಗೆದು ಅಗಾಗ್ಗೆ ಜಗಳ ಮಾಡುತ್ತಿದ್ದು ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದ್ದರು. ಹೀಗಿರುವಾಗಲೇ ಪಕ್ಕದ ಜಮೀನಿನ ಗುಡ್ಡದ ರಂಗಪ್ಪ ಹಾಗೂ ಕುಟುಂಬಸ್ಥರಾದ ಪಾಲಣ್ಣ, ನಾಗೇಶ, ತಿಪ್ಪಯ್ಯ, ರಂಗಸ್ವಾಮಿ, ಸೇರಿದಂತೆ ಸುಮಾರು 12 ಜನರ ಗುಂಪು ಭಾಗ್ಯಮ್ಮ ಹಾಗೂ ಇತರೆ ಮೂವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಘಟನೆಯಲ್ಲಿ ಭಾಗ್ಯಮ್ಮ, ಮಧು, ದುರ್ವಿನಿತ ಹಾಗೂ ಹನುಮಕ್ಕ ಎಂಬ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನೂ ಹಲ್ಲೆಯ ವೀಡಿಯೋ ಕೂಡ ಲಭ್ಯವಾಗಿದ್ದು ಗುಡ್ಡದ ರಂಗಪ್ಪ ಅವರ ಗುಂಪು ಹಲ್ಲೆ ಮಾಡುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾದವರು ಸದ್ಯ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
31/12/2024 05:21 pm