ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಪ.ಪಂ ಸಭಾಂಗಣದಲ್ಲಿ 2025-26 ನೇ ಸಾಲಿನ ಆಯ-ವ್ಯಯದ ಮಹತ್ವದ ಸಾರ್ವಜನಿಕರ ಪೂರ್ವಭಾವಿ ಸಭೆ

ಮೊಳಕಾಲ್ಮುರು: ಪ.ಪಂ ಸಭಾಂಗಣದಲ್ಲಿ 2025-26 ನೇ ಸಾಲಿನ ಆಯ-ವ್ಯಯದ ಮಹತ್ವದ ಸಾರ್ವಜನಿಕರ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಕೋನಸಾಗರ ರಸ್ತೆಯ ಇಕ್ಕೆಲೆಗಳಲ್ಲಿ ಚರಂಡಿ ನಿರ್ಮಾಣ ಮತ್ತು ಗಿಡಗಳನ್ನು ನೆಡುವುದು, ಸ್ವಶಾನದಲ್ಲಿ ಗಿಡನೆಟ್ಟು ವಿದ್ಯುತ್ ಸೌಕರ್ಯ ಕಲ್ಪಿಸುವುದು, 9 ನೇ ವಾರ್ಡ್‌ನಲ್ಲಿನ ಪಾರ್ಕ್‌ಗಳನ್ನು ಉನ್ನತೀಕರಿಸುವುದು. ನೀರಿನ ಸೌಕರ್ಯ, ಮುಖ್ಯ ಸ್ಥಳಗಳಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ, ಪಪಂ ವ್ಯಾಪ್ತಿಯ ಪ್ರಮುಖ ರಸ್ತೆಗಳ ದುರಸ್ಥಿ ಕಾರ್ಯ, ಪದ್ಮಶಾಲಿ ಕಲ್ಯಾಣ ಮಂಟಪದ ಪಕ್ಕದ ಪಪಂಗೆ ಸೇರಿದ ಸ್ಥಳದಲ್ಲಿ ಮಳಿಗೆಗಳ ನಿರ್ಮಾಣ, ಬಾವಿಗಳನ್ನು ಸ್ವಚ್ಚಗೊಳಿಸಬೇಕು. ಚಿಕನ್ ಹಾಗೂ ಮಟನ್ ಸೆಂಟರ್‌ಗಳನ್ನು ಪಟ್ಟಣದಿಂದ ಹೊರ ಹಾಕಬೇಕು ಎನ್ನುವ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ.

ಸಭೆಯಲ್ಲಿ ಪಪಂ ಅಧ್ಯಕ್ಷರಾದ ಲೀಲಾವತಿ ಸಿದ್ದಣ್ಣ, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಸದಸ್ಯರಾದ ಪಿ. ಲಕ್ಷ್ಮಣ್ ಸೇರಿದಂತೆ ಸದಸ್ಯರು ಇದ್ದರು.

Edited By : PublicNext Desk
Kshetra Samachara

Kshetra Samachara

31/12/2024 04:15 pm

Cinque Terre

1.16 K

Cinque Terre

0

ಸಂಬಂಧಿತ ಸುದ್ದಿ