ಚಿತ್ರದುರ್ಗ : ಚಿತ್ರದುರ್ಗದ ಬಾಲ ಭವನದಲ್ಲಿ ಹಿರಿಯ ನಾಗರೀಕರಿಗೆ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಅಂದತ್ವ ನಿಯಂತ್ರಣ ಕಾರ್ಯಕ್ರಮ ಇವರ ಸಹಯೋಗದೊಂದಿಗೆ ಹಿರಿಯ ನಾಗರೀಕರಿಗೆ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಆಗಮಿಸಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಶಾಸಕ ಕೆ.ಸಿ ವೀರೇಂದ್ರ ಅವರು ಮಾತನಾಡಿದ್ದು ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ವಯಸ್ಸಾದ ತಂದೆ-ತಾಯಿಗಳು ಇರುತ್ತಾರೆ. ಅವರು ತಮ್ಮ ಮಕ್ಕಳಿಗೆ ತಮ್ಮ ಯವ್ವನವನ್ನೆ ಮುಡಿಪಾಗಿ ಇಡುತ್ತಾರೆ. ನಾವು ವಯಸ್ಸಾದ ವೇಳೆ ನಮ್ಮ ಮಕ್ಕಳು ನಮ್ಮನ್ನ ಹೇಗೆ ನೋಡುಕೊಳ್ಳುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಹಾಗಾಗಿ ಸರ್ಕಾರ ಹಿರಿಯರಿಗೋಸ್ಕರ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ನಮ್ಮ ಆರ್ಥಿಕ ಪರಿಸ್ಥಿತಿ ಚನ್ನಾಗಿದ್ದರೆ ಮಕ್ಕಳನ್ನ ಕೇಳುವ ಪರಿಸ್ಥಿತಿ ಬರುವುದಿಲ್ಲ, ಇನ್ನೂ ನಮ್ಮ ಸರ್ಕಾರ ಹಿರಿಯರಿಗೆ ಅನೇಕ ಕೆಲಸ ಮಾಡಿಕೊಂಡು ಬಂದಿದ್ದು ಹಿರಿಯರಿಗೆ ಸಹಾಯವಾಣಿ ಸಹ ಪ್ರಾರಂಭ ಮಾಡಿಕೊಂಡು ಬಂದಿದ್ದು ಇದೇ ರೀತಿ ಅನೇಕ ಯೋಜನೆಗಳನ್ನ ಸರ್ಕಾರ ಹಿರಿಯರಿಗೆ ಜಾರಿಗೆ ಬಂದಿದೆ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ತಿಳಿಸಿದರು.
ಈ ಸಂದರ್ಭದಲ್ಲಿ ಅಂಗವಿಕಲ ಕಲ್ಯಾಣಾಧಿಕಾರಿ ಜಿ.ವೈಶಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಕೆ ಅಧಿಕಾರಿ ಭಾರತಿ ಆರ್ ಬಣಕಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಹಾಗೂ ಹಿರಿಯ ನಾಗರೀಕರು ಹಾಜರಿದ್ದರು.
Kshetra Samachara
03/01/2025 03:03 pm