ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂಚಿಟಿಗ ಮಠದ ಸಮೀಪ ಚಿರತೆ ಪ್ರತ್ಯಕ್ಷ

ಹೊಸದುರ್ಗ : ಪಟ್ಟಣದ ಹೊರ ವಲಯದಲ್ಲಿರುವ ಕುಂಚಿಟಿಗ ಶ್ರೀ ಮಠದ ಸಮೀಪ ಸಂಜೆ ಸುಮಾರಿಗೆ ಬೃಹತ್ ಗಾತ್ರದ ಚಿರತೆಯೊಂದು ಕಾಣಿಸಿಕೊಂಡಿದೆ.

ಕಳೆದ ಮೂರು ನಾಲ್ಕು ವರ್ಷಗಳಿಂದ ಬಿಟ್ಟು ಬಿಡದೆ ಕರಡಿಗಳ ಹಾವಳಿಯಿಂದ ಬಿಸತ್ತಿದ ವಾಯು ವಿಹಾರಿಗಳು ಇದೀಗ ಚಿರತೆ ಭಯ ಹುಟ್ಟಿಸಿದೆ.

ಮಠದ ಸುತ್ತಮುತ್ತಲಿನ ಸಾರ್ವಜನಿಕರು ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರಕೆಂದು ಶ್ರೀಮಠದ ಸಮೀಪವಿರುವ ವಿಶಾಲವಾದ ಸ್ಥಳಕ್ಕೆ ವಾಕಿಂಗ್ ಹೋಗುತ್ತಿದ್ದವರಿಗೆ ಮತ್ತೊಂದು ತಲೆನೋವು ಹೆದರಾಗಿದೆ.

ಇದರಿಂದ ತಮ್ಮ ದೈನಂದಿನ ಕೆಲಸಗಳಿಗೂ ತೊಂದರೆಯಾಗಿದ್ದು,ಶ್ರೀ ಮಠದ ಸಮೀಪವೇ ಮನೆಗಳಿರುವ ಕಾರಣ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

03/01/2025 09:44 pm

Cinque Terre

3.08 K

Cinque Terre

0

ಸಂಬಂಧಿತ ಸುದ್ದಿ