ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರದ ಸೌಲಭ್ಯ ಪಡೆಯಲು ವೀರಶೈವ ಸಮಾಜದ ಸಂಘಟನೆ ಅವಶ್ಯವಿದೆ - ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಡಿ ಮಂಜುನಾಥ್

ಮೊಳಕಾಲ್ಮುರು:ತಾಲ್ಲೂಕಿನ ಕೊಂಡ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಸದಸ್ಯತ್ವ ಅಭಿಯಾನ ನಡೆಯಿತು.

ಕಾರ್ಯಕ್ರಮದಲ್ಲಿ ಮಹಾಸಭಾದ ತಾಲೂಕು ಘಟಕ ಅಧ್ಯಕ್ಷ ಎಂಡಿ ಮಂಜುನಾಥ್ ಮಾತನಾಡಿ,ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಜಾತಿಗಳು ಸಂಘಟನೆಯಾಗುವ ಅಗತ್ಯವಿರುವ ಕಾರಣ ವೀರಶೈವ ಸಮಾಜದವರು ಒಗಟ್ಟು ಪ್ರದರ್ಶನ ಮೂಲಕ ಸಹಕಾರ ನೀಡಬೇಕು.ತಾಲ್ಲೂಕು ಸಂಘಕ್ಕೆ 10 ಸಾವಿರ ಸದಸ್ಯರ ನೋಂದಣಿ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಸಮಾವೇಶ ನಡೆಸಲು ಉದ್ದೇಶಿಸಲಾಗಿದ್ದು ಜನಾಂಗದ ಮುಖಂಡರು ಸಹಕಾರ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಪ್ರದೀಪ್ ವಹಿಸಿದ್ದರು. ನಿವೃತ್ತ ಶಿಕ್ಷಕ ಕಾ.ತಿ. ಮಾಸ್ತರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ. ರೇವಣ್ಣ, ಮುಖಂಡರಾದ ಟಿ. ಸಿದ್ದಲಿಂಗಪ್ಪ, ಜಿ.ಸಿ. ನಾಗರಾಜ್, ಎಚ್.ಸಿ. ಪ್ರದೀಪ್, ವಿನಯಕುಮಾರ್, ರಾಜಣ್ಣ, ಗ್ರಾಮಪಂಚಾಯಿತಿ ಸದಸ್ಯೆ ಶಾಂತಮ್ಮ, ಇದ್ದರು.

Edited By : PublicNext Desk
Kshetra Samachara

Kshetra Samachara

05/01/2025 07:46 pm

Cinque Terre

4.76 K

Cinque Terre

0

ಸಂಬಂಧಿತ ಸುದ್ದಿ