ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಚುನಾವಣೆ

ಚಿತ್ರದುರ್ಗ : ನಗರದ ಚಿತ್ರದುರ್ಗ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತಕ್ಕೆ 2025-2030 ನೇ ಸಾಲಿಗೆ ನಿರ್ದೇಶಕ ಸ್ಥಾನಕ್ಕೆ ಚುನಾವಣೆಯನ್ನು ಘೋಷಣೆ ಮಾಡಲಾಗಿದ್ದು, ಗುರುವಾರ ಸಾಲಗಾರರಲ್ಲದೆ ಕ್ಷೇತ್ರಕ್ಕೆ ಜಾಲಿಕಟ್ಟೆಯ ಸಿ ರುದ್ರಪ್ಪ ಹಾಗೂ ಸಾಲಗಾರರ ಕ್ಷೇತ್ರದಿಂದ ಎಂ.ಶಶಿಧರ್ ನಾಮಪತ್ರವನ್ನು ಸಲ್ಲಿಸಿದರು.

ಈ ಬ್ಯಾಂಕ್‍ನಲ್ಲಿ ಸಾಲಗಾರರ ಕ್ಷೇತ್ರದಿಂದ 14 ಜನರ ನಿರ್ದೆಶಕ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಇದರಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ 07, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ 01, ಪರಿಶಿಷ್ಠ ಪಂಗಡದ ಮಿಸಲು ಸ್ಥಾನ 01ಕ್ಕ ಮಹಿಳಾ ಮೀಸಲು ಸ್ಥಾನ 02  ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನ 01ಕ್ಕೆ ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನ 01 ಕ್ಕೆ ಹಾಗೂ ಸಾಲಗಾರರಲ್ಲದ ಕ್ಷೇತ್ರಕ್ಕೆ 01 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸಾಲಗಾರ ಕ್ಷೇತ್ರದಲ್ಲಿ ಕಸಬಾ ಹೋಬಳಿಯಲ್ಲಿ 05, ಭರಮಸಾಗರ ಹೋಬಳಿಯಲ್ಲಿ 03 ತುರುವನೂರು ಹೊಬಳಿ 03 ಹಿರೇಗುಂಟನೂರು ಹೋಬಳಿಯಲ್ಲಿ 02 ಹಾಗೂ ಸಾಲಗಾರರಲ್ಲದೆ ಕ್ಷೇತ್ರಕ್ಕೆ ಚಿತ್ರದುರ್ಗ ತಾಲ್ಲೂಕು ಪೂರ್ಣವಾಗಿದ್ದು ಇದಕ್ಕೆ 01 ಸ್ಥಾನವನ್ನು ನೀಡಲಾಗಿದೆ, ಇದಕ್ಕೆಲ್ಲಾ ಪೂರ್ಣವಾಗಿ 369 ಮತದಾರರಿದ್ದಾರೆ.

ಈ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೇ ಈಗಾಗಲೇ ಪ್ರಾರಂಭವಾಗಿದ್ದು, ಜ. 4ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಜ. 05 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದ್ದು, ಜ. 06 ನಾಮಪತ್ರ ಹಿಂಪಡೆಯಲು ಕೂನೆಯ ದಿನವಾಗಿದೆ. ಜ. 8 ರಂದು ಮಾದರಿ ಮತ ಪತ್ರ ಪ್ರಕಟಣೆ, ಜ. 12 ರಂದು ಬೆಳಿಗ್ಗ 9 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು ಚುನಾವಣೆ ಮುಗಿದ ನಂತರ ಮತಗಳ ಎಣಿಕೆ ಕಾರ್ಯ ನಡೆದು ಫಲಿತಾಂಶವನ್ನು ಘೋಷಿಸಲಾಗುವುದು.

ಈ ಸಂದರ್ಭದಲ್ಲಿ ಶಶಿಧರ್, ಶಿವಾನಂದ, ನಾಗರಾಜ್, ಲಿಂಗಬಸಪ್ಪ ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

02/01/2025 03:06 pm

Cinque Terre

1.9 K

Cinque Terre

0

ಸಂಬಂಧಿತ ಸುದ್ದಿ