ಬೆಳಗಾವಿ: ಹಸಿ ಕಸ, ಒಣ ಕಸ ವಿಂಗಡಿಸಿ ಕೊಡುವಂತೆ ಹೇಳಿದ ಪೌರಕಾರ್ಮಿಕ ಹಾಗೂ ಸ್ಥಳೀಯರ ನಡುವೆ ಗಲಾಟೆ ಆಗಿರುವ ಘಟನೆ ಬೆಳಗಾವಿಯ ನ್ಯೂ ಗಾಂಧಿನಗರನಲ್ಲಿ ನಡೆದಿದೆ.
ಬೆಳಗಾವಿ ಗಾಂಧಿನಗರದಲ್ಲಿ ಇಂದು ಬೆಳಿಗ್ಗೆ ಕಸ ತೆಗೆದುಕೊಂಡು ಹೋಗುವ ವಿಚಾರಕ್ಕೆ ಪೌರ ಕಾರ್ಮಿಕ ಬಾದಲ್ ಡಾವಳೆ ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದಿದೆ. ಕಸ ಸಂಗ್ರಹ ಬಿಟ್ಟು ರೊಚ್ಚಿಗೆದ್ದ ಕಾರ್ಮಿಕರಿಂದ ಪೊಲೀಸ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ನ್ಯೂ ಗಾಂಧಿ ನಗರದ ಮನೆಯ ಮೊಯಿನುದ್ದೀನ್, ದಫೇದಾರ, ವಾಜೀದ್ ಶೇಖ್ ಎಂಬವರು ಗಲಾಟೆ ಮಾಡಿ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಪೌರಕಾರ್ಮಿಕ ಆರೋಪ ಮಾಡಿದ್ದಾರೆ.
ಇನ್ನು, ಪೌರ ಕಾರ್ಮಿಕರು ಕಸ ಸಂಗ್ರಹಿಸೋ ವಾಹನ ತೆಗೆದುಕೊಂಡು ಪೊಲೀಸ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಬಳಿಕ ದೂರು ದಾಖಲಾಗಿದೆ ಎಂದು ಪೊಲೀಸರು ಕಾರ್ಮಿಕರನ್ನು ಠಾಣೆಯಿಂದ ಕಳುಹಿಸಿದರು. ಹಸಿ ಕಸ, ಒಣ ಕಸ ವಿಂಗಡಿಸಿ ತೆಗೆದುಕೊಳ್ಳಲು ಹೊಸದಾಗಿ ಬಂದಿರುವ ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ.
ಪಾಲಿಕೆ ಆಯುಕ್ತರ ಸೂಚನೆ ಪಾಲಿಸಲು ಮುಂದಾದ ಪೌರಕಾರ್ಮಿಕನ ಜೊತೆ ಗಲಾಟೆ ಮಾಡಲಾಗಿದೆ. ಗಲಾಟೆ ಬಗೆಹರಿಸಲು ಬಂದ ಪಾಲಿಕೆ ಸದಸ್ಯ ಅಜೀಜ್ ಪಟವೇಗಾರ್, ಕಳೆದ ನಾಲ್ಕು ದಿನಗಳಿಂದ ಕಸ ಸಂಗ್ರಹಕ್ಕೆ ಬಂದಿಲ್ಲ. ಕೇಳಲು ಹೋದರೆ ಕಾರ್ಮಿಕರು ನನಗೆ ದಾದಾಗಿರಿ ಮಾಡ್ತಿದ್ದಾರೆ ಎಂದು ಅಜೀಜ್ ಹೇಳಿದ್ದಾರೆ.
ನ್ಯೂ ಗಾಂಧಿನಗರದಲ್ಲಿ ಕಸದ ಸಮಸ್ಯೆ ಕುರಿತು ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿ ಕೂಡ ಪ್ರಸಾರ ಮಾಡಲಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೌರಕಾರ್ಮಿಕರು ಕಸ ಸಂಗ್ರಹ ಮಾಡುವ ಕೆಲಸ ಬಿಟ್ಟು ಪಾಲಿಕೆ ಮುಂದೆ ಪ್ರತಿಭಟಿಸಲು ಮುಂದಾಗಿದ್ದಾರೆ.
PublicNext
29/12/2024 07:59 pm