ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: "ಸರಿಯಾಗಿ ತಿಳಿಯದೆ ನಾಲಿಗೆ ಹರಿಬಿಡುವವರ ವಿರುದ್ಧ ಕಠಿಣ ಕ್ರಮ ಆಗಲಿ"- ಶಾಸಕ ಬೆಲ್ಲದ್

ಧಾರವಾಡ: ವಿಜಯಪುರದಲ್ಲಿ ದಲಿತ ಮುಖಂಡನೊಬ್ಬ ಅಮಿತ್ ಶಾ ನಾಲಿಗೆ ಕತ್ತರಿಸಿದವರಿಗೆ ಬಹುಮಾನ ಘೋಷಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಬೆಲ್ಲದ್, ಆ ರೀತಿ ಬಹುಮಾನ ಘೋಷಣೆ ಮಾಡಿದವರೆಲ್ಲ ಕಾಂಗ್ರೆಸ್ ಕಾರ್ಯಕರ್ತರೇ ಆಗಿರುತ್ತಾರೆ. ಕಾಂಗ್ರೆಸ್ ಬದಲಿಗೆ ದಲಿತ ಮುಖಂಡರ ಹೆಸರು ಹೇಳುತ್ತಾರೆ. ಕಾಂಗ್ರೆಸ್ ಜೊತೆಗೆ ಇರುವ ದಲಿತ ಮುಖಂಡರೇ ಹೀಗೆ ಮಾತನಾಡುತ್ತಾರೆ. ದಲಿತರಿಗೆ ಹೆಚ್ಚು ನ್ಯಾಯ ಸಿಕ್ಕಿದ್ದೇ ಬಿಜೆಪಿ ಅವಧಿಯಲ್ಲಿ. ಇದು ಉಳಿದೆಲ್ಲ ದಲಿತ ನಾಯಕರಿಗೆ ಗೊತ್ತಿದೆ. ‌

ಐವತ್ತು ವರ್ಷಗಳ ಮೀಸಲಾತಿ ಮುಂದುವರಿಕೆ ಆಗುವ ವಿಚಾರ ಇತ್ತು. ಇದನ್ನು ಮುಂದುವರೆಸಿದ್ದು ವಾಜಪೇಯಿ ಹಾಗೂ ಮೋದಿ ಸರ್ಕಾರ. ಒಳ ಮೀಸಲಾತಿ ಚಿಂತನೆ ಕೊಟ್ಟಿದ್ದೇ ಬಿಜೆಪಿ. ಅಂಬೇಡ್ಕರ್‌ ಅವರ ಪಂಚಕ್ಷೇತ್ರ ಪುನರುಜ್ಜೀವನ ಮಾಡಿದ್ದು ಬಿಜೆಪಿ. ಅವರಿಗೆ ಭಾರತ ರತ್ನ ಕೊಟ್ಟಿದ್ದು ಕಾಂಗ್ರೆಸೇತರ ಸರ್ಕಾರ. ದಲಿತರಿಗೆ ಒಳ್ಳೆಯದು ಮಾಡಿದ್ದು ಬಿಜೆಪಿ ಮಾತ್ರ ಎಂದರು.

ಹೀಗಿರುವಾಗ ನಾಲಿಗೆ ಹರಿಬಿಡುವ ಮುಖಂಡರ ಮೇಲೆ ಕ್ರಮ ಆಗಬೇಕು. ಆದರೆ, ಈಗಿನ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲ ಅನಿಸುತ್ತದೆ. ಸಮಾಜ ವಿರೋಧಿ, ದೇಶ ವಿರೋಧಿಗಳ ಮೇಲೆ ಈ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲ. ಪಾಕ್ ಪರ ಘೋಷಣೆ ಕೂಗಿದ ನಾಸೀರ್ ಹುಸೇನ್ ವಿಚಾರಣೆ ಆಗಲಿಲ್ಲ. ಹೀಗಾಗಿ ಕಾಂಗ್ರೆಸ್‌ನಿಂದ ಕ್ರಮದ ಅಪೇಕ್ಷೆ ಮಾಡಲಾಗದು. ಆದರೆ, ಇಂಥವರ ಮೇಲೆ ಕ್ರಮ ಆಗಬೇಕು ಎಂದು ಬೆಲ್ಲದ ಆಗ್ರಹಿಸಿದರು.

ವಕ್ಫ್ ವಿಚಾರವಾಗಿ ಬಳ್ಳಾರಿಯಿಂದ ಯತ್ನಾಳ್ ಪಾದಯಾತ್ರೆ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಕ್ಫ್‌ ನಿಂದ ಬಹಳ ಜನರಿಗೆ ತೊಂದರೆಯಾಗಿದೆ. ಒಂದಿಬ್ಬರು ಹೋರಾಟ ಮಾಡಿದರೆ ಸಾಲದು. ಎಲ್ಲರೂ ಹೋರಾಟ ಮಾಡಬೇಕಾಗುತ್ತದೆ. ಬೇರೆ ಬೇರೆ ರೀತಿಯ ಹೋರಾಟದ ಅಗತ್ಯವಿದೆ. ಅದಕ್ಕೆ ಎಲ್ಲರೂ ಸಹಕಾರ ಕೊಡಬೇಕು. ವಿಜಯೇಂದ್ರ ಈ ಹೋರಾಟದಲ್ಲಿ ಭಾಗಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕು. ಪಕ್ಷದ ಆದೇಶದಂತೆ ವಿಚಾರ ಮಾಡುತ್ತೇವೆ ಎಂದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/12/2024 06:09 pm

Cinque Terre

229.62 K

Cinque Terre

8

ಸಂಬಂಧಿತ ಸುದ್ದಿ