ಕುಂದಗೋಳ : ಇಲಾಖೆಗಳ ಪ್ರಗತಿ ಚರ್ಚೆಗೆ ಆಯೋಜನೆಗೊಂಡ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ವೇದಿಕೆ ತಾಲೂಕು ಪಂಚಾಯಿತಿ ಕ್ರಿಯಾ ಯೋಜನೆ, ಬೆಳೆ ವಿಮೆ 50-50 ವಿಷಯದಲ್ಲೇ ತಾರಕಕ್ಕೆ ಏರಿ ಶಾಂತವಾಯಿತು.
ಹೌದು ! ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಗೆ ಆಗಮಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ, ಮುಖಂಡ ರಮೇಶ್ ಕೊಪ್ಪದ, ಜಗದೀಶ್ ಉಪ್ಪಿನ್, ಸುರೇಶ್ ಸವಣೂರು ಕ್ರಿಯಾ ಯೋಜನೆಗೆ ಯಾಕೆ ಹಿನ್ನಡೆಯಾಗಿದೆ ? ರೈತರ ಬೆಳೆಗೆ ಪರಿಹಾರದಲ್ಲಿ 50-50 ಅವ್ಯವಹಾರ ನಡೆದಿದೆ, ಈ ಬಗ್ಗೆ ಇಲಾಖೆ ವೈಫಲ್ಯ ಪ್ರಶ್ನಿಸಿದರು.
ಈ ವೇಳೆ ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ, ತೋಟಗಾರಿಕೆ ಸಹಾಯಕ ನಿರ್ದೇಶಕರ ಮಂಜುನಾಥ ಕರೋಶಿ ವಿಷಯ ಒಪ್ಪಿಸುವ ವೇಳೆ ಮಾತಿನ ಚಕಮಕಿ ನಡೆಯಿತು.
ಬಳಿಕ ಆರಂಭವಾದ ಸಭೆಯಲ್ಲಿ ಅರ್ಹತೆ ಇಲ್ಲದಿದ್ದರೂ ಎಸ್ಡಿಎಂಸಿ ಅಧ್ಯಕ್ಷರನ್ನು ಸರ್ಕಾರಿ ಶಾಲೆಯಲ್ಲಿ ಮುಂದುವರಿಸಿದ ವಿಷಯಕ್ಕೆ ಸಮರ್ಥನೆ ನೀಡಲು ಬಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ನಿಯಮಾನುಸಾರ ಕರ್ತವ್ಯ ಮಾಡಲು ಪಾಠ ಮಾಡಿದರು.
ಮುಖ್ಯವಾಗಿ ಆರೋಗ್ಯಾಧಿಕಾರಿ ಡಾ.ಸೋಪಿಯಾ ದಾಸರಿ ಯಾವ ಸಭೆಗೂ ಹಾಜರಾಗದೆ ಸಹ ಸಿಬ್ಬಂದಿ ಸಭೆಗೆ ಕಳುಹಿಸುವ ವಿಷಯ ಚರ್ಚೆಗೆ ಗ್ರಾಸವಾಯಿತು.
ಈ ವೇಳೆ ನೂತನ ಆಡಳಿತಾಧಿಕಾರಿ ಟಿ.ಎಸ್.ಮಲ್ಲಿಕಾರ್ಜುನ ಸಮಚಿತ್ತದಿಂದ ವಿಷಯ ಆಲಿಸಿ ಇಲಾಖೆ ವರದಿ ಆಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ತಾಲೂಕು ಪಂಚಾಯಿತಿ ಹೆಚ್ಚುವರಿ 30 ಲಕ್ಷ ಅನುದಾನ ಮತ್ತು ಕ್ರಿಯಾ ಯೋಜನೆಯಲ್ಲಿ ಸಲ್ಲಿಸಿದ ಕಾಮಗಾರಿಗಳನ್ನು ವಿವರಿಸಿದರು.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
31/12/2024 12:16 pm