ಧಾರವಾಡ: ಸಂಕಷ್ಟದಲ್ಲಿರುವ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನವಲಗುಂದ ತಾಲೂಕಿನ ಶಿರೂರು ಗ್ರಾಮದ ರೈತ ಮಲ್ಲಿಕಾರ್ಜುನಗೌಡ ಬಾಳನಗೌಡರ ಅವರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬಾರಕೋಲು ಪ್ರತಿಭಟನೆ ನಡೆಸಿದರು.
ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ರೈತರಿಗೆ ಬೆಳೆ ಪರಿಹಾರ ಮತ್ತು 2023ರ ಹಿಂಗಾರಿ ಬೆಳೆ ವಿಮೆ ತಕ್ಷಣ ಬಿಡುಗಡೆ ಮಾಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 10 ಲಕ್ಷದವರೆಗೆ ಸಾಲ ನೀಡಬೇಕು, ಖರೀದಿ ಕೇಂದ್ರದಲ್ಲಿ ಪ್ರತಿ ರೈತನಿಂದ 25 ಕ್ಷಿಂಟಾಲ್‌ವರೆಗೆ ಕಡಲೆ ಖರೀದಿ ಮಾಡಬೇಕು, ಸೋಯಾಬಿನ್ ಪ್ರತಿ ಕ್ವಿಂಟಾಲ್‌ಗೆ 10 ಸಾವಿರ ಘೋಷಣೆ ಮಾಡಿ ಪ್ರತಿ ರೈತನಿಂದ 25 ಕ್ವಿಂಟಾಲ್ ಖರೀದಿ ಮಾಡಬೇಕು. ಹತ್ತಿಗೂ 10 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಬೇಕು, 2 ಸಾವಿರ ಲೀಟರ್ ಡೀಸೆಲ್‌ನ್ನು ರೈತರಿಗೆ ಸಬ್ಸಿಡಿ ದರದಲ್ಲಿ ನೀಡಬೇಕು ಎಂದು ರೈತ ಮಲ್ಲಿಕಾರ್ಜುನಗೌಡ ಅವರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬಾರಕೋಲಿನಿಂದ ನೆಲಕ್ಕೆ ಹೊಡೆದು, ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/12/2024 12:51 pm