ಬೆಂಗಳೂರು: ವರ್ಷದ ಕೊನೆ ದಿನವಾದ ಮಂಗಳವಾರ 67 ಐಎಎಸ್, 65 ಐಪಿಎಸ್ ಮತ್ತು 21 ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2025ರ ಜನವರಿ 1 ರಿಂದಲೇ ಅನ್ವಯವಾಗುವಂತೆ ಅಧಿಕಾರಿಗಳಿಗೆ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿಗಳಾದ ವಿಕಾಶ್ ಕುಮಾರ್ ಅವರನ್ನು ಬಡ್ತಿಯೊಂದಿಗೆ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಹುದ್ದೆಗೆ, ರಮಣ ಗುಪ್ತ ಅವರನ್ನು ಬೆಂಗಳೂರು ನಗರ ಗುಪ್ತದಳದ ಹೆಚ್ಚುವರಿ ಕಮಿಷನರ್ ಆಗಿ ಮತ್ತು ಚೇತನ್ ಸಿಂಗ್ ರಾಥೋಡ್ ಅವರನ್ನು ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಅಮಿತ್ ಸಿಂಗ್: ಐಜಿಪಿ, ಪಶ್ಚಿಮ ವಲಯ(ಮಂಗಳೂರು), ವಂಶಿಕೃಷ್ಣ: ಡಿಐಜಿ, ಪೊಲೀಸ್ ನೇಮಕಾತಿ ವಿಭಾಗ, ಬೆಂಗಳೂರು, ಕಾರ್ತಿಕ್ ರೆಡ್ಡಿ: ರಾಮನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮುಂದುವರಿಕೆ, ಕುಲದೀಪ್ ಕುಮಾರ್ ಜೈನ್: ಡಿಐಜಿ, ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ, ಡಾ.ಭೀಮಾಶಂಕರ ಗುಳೇದ್: ಬೆಳಗಾವಿ ಎಸ್ ಪಿಯಾಗಿ ಮುಂದುವರಿಕೆ, ಎನ್ ಶಶಿ ಕುಮಾರ್: ಪೊಲೀಸ್ ಮಹಾನಿರೀಕ್ಷಕರಾಗಿ ಬಡ್ತಿ, ಹುಬ್ಬಳ್ಳಿ- ಧಾರವಾಡ ನಗರ, ಡಾ.ವೈ.ಎಸ್. ರವಿ ಕುಮಾರ್: ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ಆಗಿ ಬಡ್ತಿ (ಇಂಟಲಿಜೆನ್ಸ್, ಬೆಂಗಳೂರು. ಸಂತೋಷ್ ಬಾಬು: ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ, ಇಶಾ ಪಂತ್: ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ, ಜಿ.ಸಂಗೀತಾ: ಡಿಐಜಿ, ಸಿಐಡಿ ಅರಣ್ಯ ಘಟಕ, ಸೀಮಾ ಲಾಟ್ಕರ್: ಡಿಐಜಿ, ಮೈಸೂರು ಕಮಿಷನರ್ ಆಗಿ ಮುಂದುವರಿಕೆ, ರೇಣುಕಾ ಕೆ.ಸುಕುಮಾರ್: ಡಿಐಜಿಯಾಗಿ ಬಡ್ತಿ, ಡಿಸಿಆರ್‌ಇ, ಬೆಂಗಳೂರು.
PublicNext
01/01/2025 10:49 am