ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಂಚಕ್ಕೆ ಬೇಡಿಕೆ ಇಡುತ್ತಿದ್ದಾಗಮೇ ಕ್ಯಾಮರಾಗೆ ಸಿಕ್ಕಿಬಿದ್ದ ಡ್ರಗ್ ಇನ್ಸ್‌ಪೆಕ್ಟರ್ ನಿಧಿ

ಲಕ್ನೋ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಡ್ರಗ್ ಇನ್ಸ್‌ಪೆಕ್ಟರ್ ನಿಧಿ ಪಾಂಡೆ ಲಂಚ ಕೇಳುತ್ತಿರುವ ವಿಡಿಯೋ ವೈರಲ್ ಆದ ನಂತರ ಅವರನ್ನು ಅಮಾನತು ಮಾಡಲಾಗಿದೆ.

ನಿಧಿ ಪಾಂಡೆ ಅವರು ಇತ್ತೀಚೆಗೆ ಮೆಡಿಕಲ್ ಸ್ಟೋರ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ವರದಿ ಸಲ್ಲಿಕೆ ಹೆಸರಿನಲ್ಲಿ ಲಂಚ ಕೇಳಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅಂಗಡಿಯ ಒಬ್ಬ ವ್ಯಕ್ತಿಗೆ ನಿಧಿ ಪಾಂಡೆ ಅವರು, 'ನೀವು ಚೌಕಾಶಿ ಮಾಡಬೇಡಿ, ನೀವು ಅಂಗಡಿಯನ್ನು ನಡೆಸಬೇಕೆ ಅಥವಾ ಬೇಡವೇ, ನೀವು ಅದನ್ನು ನಡೆಸಬೇಕಾದರೆ ಕೇಳಿದಷ್ಟು ಹಣವನ್ನು ನೀಡಿ. ಇಲ್ಲದಿದ್ದರೆ ನಿಮ್ಮಲ್ಲಿ ಹಲವು ಲೋಪಗಳಿವೆ, ನೇರವಾಗಿ ಎಫ್‌ಐಆರ್ ದಾಖಲಿಸಲಾಗುವುದು' ಎಂದು ಹೇಳಿದ್ದನ್ನು ಕೇಳಬಹುದಾಗಿದೆ.

Edited By : Vijay Kumar
PublicNext

PublicNext

01/01/2025 12:37 pm

Cinque Terre

370.26 K

Cinque Terre

5