ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮಲೆನಾಡಿಲ್ಲಿ ತುಳುನಾಡಿನ ನೇಮೋತ್ಸವ

ಚಿಕ್ಕಮಗಳೂರು: ಜಿಲ್ಲೆಯ ಕಳಸ ಭಾಗದಲ್ಲಿ ತುಳುನಾಡಿನ ದೈವ ಆಚರಣೆಗಳಲ್ಲಿ ಪ್ರಮುಖವಾದ ನೇಮೋತ್ಸವ, ಕೋಲಗಳು ಕಳಸ ತಾಲೂಕಿನ ಕೆಲವೆಡೆ ಅನಾಧಿಕಾಲದಿಂದಲೂ ಚಾಲ್ತಿಯಲ್ಲಿದೆ. ತಾಲೂಕಿನ ಮಾವಿನಕೆರೆ ಗ್ರಾಮದ ಕುಂಬಳಡಿಕೆ ಶ್ರೀ ಕ್ಷೇತ್ರದಲ್ಲಿ ಅದ್ದೂರಿ ನೇಮೋತ್ಸವ ನಡೆಯಿತು. ನೇಮೋತ್ಸವ ಪ್ರಯುಕ್ತ ವಿಶೇಷ ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳು ನಡೆದವು. ನಂತರ ಕೋಲಕ್ಕೆ ಚಾಲನೆ ನೀಡಲಾಯಿತು.

ಈ ಕೋಲದ ವಿಶೇಷ ಎಂದರೆ ಕೊರಗಜ್ಜನ ಮೂಲ ಸ್ಥಾನವಾದ ಮಂಗಳೂರಿನ ಕುತ್ತಾರಿನ ಸನ್ನಿಧಾನದಲ್ಲಿ ಕೋಲ ಕಟ್ಟವವರೇ ಇಲ್ಲಿಯೂ ಕೋಲ ಕಟ್ಟುತ್ತಾರೆ. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಕೊರಗಜ್ಜನಲ್ಲಿ ಕಷ್ಟಗಳನ್ನು ಪರಿಹರಿಸುವಂತೆ ಪುಟ್ಟ ಮಕ್ಕಳನ್ನು ಕೊರಗಜ್ಜನ ಕೈಗೆ ಕೊಟ್ಟು ಹೂವಿನ ಮಾಲೆ, ಗಂಧದ ಪ್ರಸಾದವನ್ನು ಸ್ವೀಕರಿಸಿ ಕಷ್ಟವನ್ನು ಪರಿಹಾರ ಮಾಡಿ ಕೊಡುವಂತೆ ಬೇಡಿಕೊಂಡರು

Edited By : PublicNext Desk
Kshetra Samachara

Kshetra Samachara

29/12/2024 06:05 pm

Cinque Terre

1.16 K

Cinque Terre

0